ಬೆಂಗಳೂರು, 27 ಜನವರಿ:
ಲೋಕಸಭಾ ಸಮರ ಗೆಲ್ಲಲು ಬಿಜೆಪಿ ಮತ್ತೆ ಕಾರ್ಯಸನ್ನದ್ಧವಾಗಿದೆ. ವಿಧಾನಸಬಾ ಚುನಾವಣೆಯ ಸೋಲಿನ ಸೇಡನ್ನ ತೀರಿಸಿಕೊಳ್ಳಲು ಉತ್ಸುಕವಾಗಿದೆ. ಪಕ್ಷ ತೊರೆದ ನಾಯಕರನ್ನ ಮತ್ತೆ ಘರ್ವಾಪ್ಸಿ ಮಾಡಿಕೊಂಡು ಪಕ್ಷ ಸಂಘಟನೆಗೆ ಮಾಡುತ್ತಿದೆ. ಇದೀಗ ಲೋಕಸಭಾ ಚುನಾವಣೆ ನಿಟ್ಟಿನಲ್ಲಿ ಕೇಸರಿ ಪಾಳಯ ಇವತ್ತು ಕಾರ್ಯಕಾರಿಣಿ ಸಭೆ ನಡೆಸುತ್ತಿದೆ.
ಲೋಕಸಭಾ ಸಮರದಲ್ಲಿ ಮೈತ್ರಿ ಮೂಲಕ ರಣಕಹಳೆ ಮೊಳಗಿಸಿರೋ ಕಮಲ ಪಡೆ ಗೆಲುವಿನ ಸೋಪಾನ ಕಟ್ಟಲು ಸಜ್ಜಾಗಿದೆ. ಕಾಂಗ್ರೆಸ್ ಪಾಳಯದ ಮೇಲೆ ಸವಾರಿ ಮಾಡಲು ಕೆಳಮನೆ ಚುನಾವಣೆಯನ್ನ ಟಾರ್ಗೆಟ್ ಮಾಡಿದೆ. ಈ ಬಾರಿ ಕೈ ಪಡೆಗೆ ಟಕ್ಕರ್ ಕೊಡಲು ಯಂಗ್ ಅಂಡ್ ಎನರ್ಜಿಟಿಕ್ ನಾಯಕ ಬಿ.ವೈ. ವಿಜಯೇಂದ್ರ ಕಾರ್ಯಪ್ರವೃತ್ತರಾಗಿದ್ದಾರೆ. ಈ ನಿಟ್ಟಿನಲ್ಲಿ ಮಹತ್ವದ ಸಭೆ ನಡೆಸುತ್ತಾ ಗೆಲುವಿನ ಲಯಕ್ಕೆ ಮರಳಲು ಕಾರ್ಯತಂತ್ರ ರೂಪಿಸ್ತಿದ್ದಾರೆ.
ಇಂದು ಮಹತ್ವದ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆ!
ಬಿ.ವೈ. ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಪಟ್ಟಾಭಿಷೇಕವಾದ ಮೇಲೆ ಮೊದಲ ಸಮರಕ್ಕೆ ಸಜ್ಜಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಇವತ್ತು ಬಹು ನಿರೀಕ್ಷಿತ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆ ನಡೆಸುತ್ತಿದ್ದಾರೆ. ಅಲ್ಲದೇ ಕೇಸರಿ ಸಾರಥಿಯಾದ ಬಳಿಕ ಇದೇ ಮೊದಲ ಬಾರಿ ಕಾರ್ಯಕಾರಿಣಿಯನ್ನ ನಡೆಸ್ತಿದ್ದಾರೆ. ಈಗಾಗಲೇ ರಾಜ್ಯದಲ್ಲಿ ಪದಾಧಿಕಾರಿಗಳ ನೇಮಕವಾಗಿದ್ದು, ಶಾಸಕರುಗಳು, ಎಲ್ಲಾ ಮೋರ್ಚಾಗಳ ಅಧ್ಯಕ್ಷರುಗಳು, ಶಾಸಕರುಗಳು ಸೇರಿದಂತೆ ಇಡೀ ಸಂಘಟನೆಯಲ್ಲಿನ ಪದಾಧಿಕಾರಿಗಳನ್ನು ಒಂದೆಡೆ ಸೇರಿಸಿ ಮಹತ್ವದ ಚರ್ಚೆ ನಡೆಸಲು ಮುಂದಾಗಿದ್ದಾರೆ.
