

ಕೊಪ್ಪಳ, 21 ಜನವರಿ(ಹಿ.ಸ):
ಆ್ಯಂಕರ್ : ನಗರದ ಗವಿಶ್ರೀ ನಗರದಲ್ಲಿರುವ ಕೇತೇಶ್ವರ ಕಲ್ಯಾಣ ಮಂಟಪದ ಹತ್ತಿರದ ಸಹಸ್ರಾಂಜನೇಯ ದೇವಸ್ಥಾನದಲ್ಲಿ ಅಯೋಧ್ಯೆಯ ರಾಮಮಂದಿರದ ರಾಮನ ಮೂರ್ತಿ ಮಾಡಿದ ಶಿಲೆಯ ಉಳಿದ ಭಾಗದಲ್ಲಿ ಹನುಮನ ಮೂರ್ತಿ ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಗುವದು ಎಂದು ಸಹಸ್ರ ಆಂಜನೇಯ ದೇವಸ್ಥಾನ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಮಂಜುನಾಥ ಜಿ ಗೊಂಡಬಾಳ ತಿಳಿಸಿದ್ದಾರೆ.
22ರ ಬೆಳಗ್ಗೆ 7 ಗಂಟೆಗೆ ಕೊಪ್ಪಳ ಪುರ ಪ್ರವೇಶ ಮಾಡಲಿದೆ ಅಂದೇ ಅದನ್ನು ದೇವಸ್ಥಾನದ ಹತ್ತಿರ ತೆಗೆದುಕೊಂಡು ಹೋಗಿ ಪೂಜೆ ನೆರವೇರಿಸಿ ನಿತ್ಯ ಮೂರ್ತಿ ಸೇವಾ ಕಾರ್ಯದ ಭಾಗವಾಗಿ 6153ನೇ ಮೂರ್ತಿಯನ್ನು ಪ್ರಕಾಶ್ ಶಿಲ್ಪಿ ಅವರು ಅದೇ ಶಿಲೆಯಲ್ಲಿ ಕೆತ್ತನೆ ಮಾಡಿ ಪಂಚಾಮೃತ ಅಭಿಷೇಕ ಮಾಡುವರು.
ನಂತರ ಭಗವಂತನ ಇಚ್ಚೆ ಅನುಸಾರ ಮೂರು ಶಿಲೆಯಲ್ಲಿ ಹನುಮ, ಸೀತಾರಾಮ ಮತ್ತು ಹನುಮನ ಉತ್ತರದಂತೆ ಮೂರ್ತಿಗಳನ್ನು ಮಾಡಿ ಪ್ರತಿಷ್ಠಾಪಿಸಲಾಗುವುದು. 22ರಂದು ಬೆಳಿಗ್ಗೆ ಶ್ರೀ ರಾಮನ ಮೂರ್ತಿ ಪ್ರತಿಷ್ಠಾಪನ ಮುಹೂರ್ತದಲ್ಲಿ ಈ ಶಿಲೆಗಳಿಗೆ ಕಚ್ಚು ಹಾಕಿ ಪ್ರಾರಂಭಿಸಲಾಗುತ್ತಿದ್ದು ಈ ಶುಭ ಕಾರ್ಯದಲ್ಲಿ ರಾಮ ಹನುಮನ ಭಕ್ತರೆಲ್ಲರು ಪಾಲ್ಗೊಳ್ಳುವಂತೆ ವಿನಂತಿಸಿದ್ದಾರೆ.
