ಪಣಜಿ, 22 ಜನವರಿ(ಹಿ.ಸ):
ಆ್ಯಂಕರ್ :
ಅಯೋಧ್ಯೆ ಶ್ರೀರಾಮ ಮಂದಿರದ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ ಇರುವ ಹಿನ್ನೆಲೆಯಲ್ಲಿ ಜನವರಿ 22, ಸೋಮವಾರದಂದು ಬಹಳಷ್ಟು ಕಡೆ ರಜೆಗಳಿವೆ. ಕೆಲ ರಾಜ್ಯಗಳ ಸರ್ಕಾರಗಳು ಅಧಿಕೃತವಾಗಿಯೇ ರಜೆ ಘೋಷಿಸಿವೆ. ಕೆಲ ಕಂಪನಿಗಳೂ ಅಂದು ರಜೆ ನೀಡಿವೆ. ಇದೇ ವೇಳೆ, ಗೋವಾದ ಪ್ರಮುಖ ಆದಾಯ ಮೂಲವಾಗಿರುವ ಕ್ಯಾಸಿನೋಗಳೂ ಕೂಡ ಸೋಮವಾರ ಬಾಗಿಲು ಬಂದ್ ಮಾಡಲಿವೆ. ಸರ್ಕಾರದ ಆದೇಶ ಇಲ್ಲದಿದ್ದರೂ ಈ ಕ್ಯಾಸಿನೋಗಳು ಸ್ವ ಇಚ್ಛೆಯಿಂದ ಬಂದ್ ಮಾಡಲು ನಿರ್ಧರಿಸಿವೆ.
ವರದಿಗಳ ಪ್ರಕಾರ ಜನವರಿ 22, ಸೋಮವಾರ ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಕ್ಯಾಸಿನೋಗಳು ಕಾರ್ಯನಿರ್ವಹಿಸುವುದಿಲ್ಲ. ಸಂಜೆ 4ರ ಬಳಿಕ ಗೇಮ್ಗಳು ಇರುತ್ತವೆ.
‘ಎಲ್ಲರೂ ಅದನ್ನು ಮಾಡುತ್ತಿರುವಾಗ ನಾವೇಕೆ ಮಾಡಬಾರದು. ನಮಗೆ ರಾಮನಲ್ಲಿ ನಂಬಿಕೆ ಇದೆ. ನಮ್ಮ ಸಿಬ್ಬಂದಿಯೂ ರಾಮನನ್ನು ಪ್ರಾರ್ಥಿಸಲು ಮತ್ತು ವಿಗ್ರಹ ಪ್ರತಿಷ್ಠಾಪನಾ ಕಾರ್ಯಕ್ರಮದ ನೇರ ಪ್ರಸಾರ ವೀಕ್ಷಿಸಲು ಅವಕಾಶ ಕೊಡಲು ಬಯಸುತ್ತೇವೆ,’ ಎಂದು ಕ್ಯಾಸಿನೋ ಗೇಮಿಂಗ್ ಸಂಸ್ಥೆಗಳಲ್ಲೊಂದಾದ ಮೆಜೆಸ್ಟಿಕ್ ಪ್ರೈಡ್ನ ನಿರ್ದೇಶಕ ಶ್ರೀನಿವಾಸ್ ನಾಯಕ್ ಹೇಳಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
