ಕೋಲ್ಕತ್ತಾ, ಮಾರ್ಚ್
ಪ್ರಯಾಣಿಕರ ಕಾರ್ಯಾಚರಣೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ೧೭ ಕಿಲೋಮೀಟರ್ ಉದ್ದದ ದುಹೈನಿಂದ ಮೋದಿ ನಗರಕ್ಕೆ ಸಂಚರಿಸುವ ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆ, ಆರ್ ಆರ್ ಟಿ ಎಸ್ ವಿಭಾಗಕ್ಕೆ ಚಾಲನೆ ನೀಡಲಿದ್ದಾರೆ. ಇದೇ ವೇಳೆ ಪ್ರಧಾನಿ ಕೋಲ್ಕತ್ತಾದಿಂದ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮುರಾದ್ ನಗರ ನಿಲ್ದಾಣದಿಂದ ನಮೋ ಭಾರತ್ ರೈಲಿಗೆ ಚಾಲನೆ ನೀಡಲಿದ್ದಾರೆ. ಈ ವಿಸ್ತರಣೆಯು ಮುರಾದ್ ನಗರ, ಮೋದಿ ನಗರ ದಕ್ಷಿಣ ಮತ್ತು ಮೋದಿ ನಗರ ಉತ್ತರ ಈ ಮೂರು ನಿಲ್ದಾಣಗಳನ್ನು ಒಳಗೊಂಡಿದೆ. ಈ ಹೆಚ್ಚುವರಿ ೧೭ ಕಿಲೋಮೀಟರ್ ವಿಭಾಗದ ಉದ್ಘಾಟನೆಯೊಂದಿಗೆ, ದೆಹಲಿ – ಮೀರತ್ ಆರ್ಆರ್ಟಿಎಸ್ ಕಾರಿಡಾರ್ನ ೩೪ ಕಿಲೋಮೀಟರ್ನಲ್ಲಿ ನಮೋ ಭಾರತ್ ಸೇವೆಗಳು ಲಭ್ಯವಿರಲಿವೆ. ಈ ವಿಸ್ತರಣೆಯು ಪ್ರಾದೇಶಿಕ ಸಂಪರ್ಕವನ್ನು ಹೆಚ್ಚಿಸುವ ಮೂಲಕ ಪ್ರದೇಶದೊಳಗೆ ಪ್ರಯಾಣವನ್ನು ಹೆಚ್ಚು ಅನುಕೂಲಕರ ಮತ್ತು ತಡೆರಹಿತವಾಗಿಸುತ್ತದೆ. ದೆಹಲಿ-ಗಾಜಿಯಾಬಾದ್-ಮೀರತ್ ಆರ್ಆರ್ಟಿಎಸ್ ಕಾರಿಡಾರ್, ೮೨ ಕಿಲೋಮೀಟರ್ಗಳಷ್ಟು ವಿಸ್ತರಿಸುವುದರಿಂದ ದೆಹಲಿ ಮತ್ತು ಮೀರತ್ ನಡುವಿನ ಪ್ರಯಾಣದ ಸಮಯ ಒಂದು ಗಂಟೆಗಿಂತ ಕಡಿಮೆಯಿರುತ್ತದೆ.
