ಹೈದರಾಬಾದ್,10ನವೆಂಬರ್ (ಹಿ.ಸ):
ಆ್ಯಂಕರ್ :
ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ಹಿಂದೂ ಅವಿಭಜಿತ ಕುಟುಂಬ ಸೇರಿದಂತೆ ಸುಮಾರು 59 ಕೋಟಿ ರೂಪಾಯಿ ಮೌಲ್ಯದ ಕುಟುಂಬದ ಆಸ್ತಿ ಮತ್ತು 25 ಕೋಟಿ ರೂಪಾಯಿಗಳ ಹೊಣೆಗಾರಿಕೆಯನ್ನು ಘೋಷಿಸಿದ್ದಾರೆ.
ನವೆಂಬರ್ 30 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುವ ವೇಳೆ ಅವರು ಸಲ್ಲಿಸಿದ ಚುನಾವಣಾ ಅಫಿಡವಿಟ್ನಿಂದ ಈ ವರದಿ ಬಹಿರಂಗಗೊಂಡಿದ್ದರೂ ಅವರ ಬಳಿ ಸ್ವಂತ ಕಾರಿಲ್ಲ ಎನ್ನುವುದು ವಿಶೇಷವಾಗಿದೆ.
ಅವರ ವಿರುದ್ಧ ಒಂಬತ್ತು ಪ್ರಕರಣಗಳು ಬಾಕಿ ಉಳಿದಿವೆ, ಎಲ್ಲವೂ ತೆಲಂಗಾಣ ರಾಜ್ಯ ಆಂದೋಲನದ ಸಮಯದಲ್ಲಿ ದಾಖಲಾಗಿವೆ ಮತ್ತು ಅವರು ಯಾವುದೇ ಕ್ರಿಮಿನಲ್ ಅಪರಾಧಕ್ಕೆ ಶಿಕ್ಷೆಗೊಳಗಾಗಿಲ್ಲ.
ಅವರ ಪತ್ನಿ ಶೋಭಾ ಅವರ ಹೆಸರಿನಲ್ಲಿರುವ ಚರ ಆಸ್ತಿಗಳ ಒಟ್ಟು ಮೌಲ್ಯವು ಏಳು ಕೋಟಿ ರೂ.ಗಿಂತ ಹೆಚ್ಚಿದ್ದು, ಅವರ ಹಿಂದೂ ಅವಿಭಜಿತ ಕುಟುಂಬದ ಒಂಬತ್ತು ಕೋಟಿ ರೂ. ಹಾಗೂ ಆಕೆಯ ಬಳಿ ಸುಮಾರು 1.5 ಕೋಟಿ ಮೌಲ್ಯದ 2.81 ಕೆಜಿ ಚಿನ್ನಾಭರಣ, ವಜ್ರ ಮತ್ತಿತರ ಬೆಲೆಬಾಳುವ ವಸ್ತುಗಳು ಇವೆ.
ರಾವ್ ಅವರ ಹೆಸರಿನಲ್ಲಿರುವ ಸ್ಥಿರಾಸ್ತಿಗಳ ಒಟ್ಟು ಮಾರುಕಟ್ಟೆ ಮೌಲ್ಯ ಸುಮಾರು 8.50 ಕೋಟಿ ರೂ.ಗಳಾಗಿದ್ದು, ಹೆಚ್ಯುಎಫ್ ಹೆಸರಿನಲ್ಲಿ ಸುಮಾರು 15 ಕೋಟಿ ರೂ.ಗಳಿವೆ. ಐಟಿ ರಿಟನ್ರ್ಸ್ ಪ್ರಕಾರ ರಾವ್ ಅವರ ಒಟ್ಟು ಆದಾಯವು ಮಾರ್ಚ್ 31, 2023 ರ ವೇಳೆಗೆ 1.60 ಕೋಟಿ ರೂ.ಗಿಂತ ಹೆಚ್ಚಿದ್ದರೆ, ಮಾರ್ಚ್ 31, 2019 ರ ವೇಳೆಗೆ ಇದು ರೂ. 1.74 ಕೋಟಿ ಆಗಿತ್ತು. ಅಫಿಡವಿಟ್ನಲ್ಲಿ ರಾವ್ ಅವರು ಕೃಷಿಕ ಎಂದು ತೋರಿಸಿದರು ಮತ್ತು ಅವರ ಶೈಕ್ಷಣಿಕ ಅರ್ಹತೆ ಬಿಎ ಆಗಿದೆ.
ಹಿಂದೂಸ್ತಾನ್ ಸಮಾಚಾರ್
