ಮೇಲ್(ಮಾಲ್ಡೀವ್ಸ್) 6 ಮಾರ್ಚ್
ಆ್ಯಂಕರ್ : ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜು ಅವರ ಭಾರತ ವಿರೋಧಿ ಮಾತು ಎಗ್ಗಿಲ್ಲದೇ ಮುಂದುವರಿಯುತ್ತಿದೆ.
ಮೇ 10 ರ ನಂತರ ಭಾರತದ ಯಾವೊಬ್ಬ ಮಿಲಿಟರಿ ಸದಸ್ಯ ದೇಶದಲ್ಲಿ ಇರಬಾರದು. ಅಷ್ಟೇ ಅಲ್ಲದೇ ನಾಗರಿಕ ಉಡುಪಿನಲ್ಲಿರುವ ಭಾರತೀಯ ಅಧಿಕಾರಿಗಳೂ ನಮ್ಮ ದೇಶದಲ್ಲಿ ಇರುವಂತಿಲ್ಲ ಎಂದು ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಆದೇಶ ಪ್ರಕಟಿಸಿದ್ದಾರೆ.
ಚೀನಾ ಸಹಕಾರದಿಂದಲೇ ಅಧಿಕಾರಕ್ಕೆ ಏರಿದ ಮುಯಿಝು ಈಗ ಚೀನಾಗೆ ಮತ್ತಷ್ಟು ಹತ್ತಿರವಾಗುತ್ತಿದ್ದು ಮತ್ತೆ ಭಾರತದ ವಿರುದ್ಧ ಕಿಡಿಕಾರಿದ್ದಾರೆ.
ಮಾಲ್ಡೀವ್ಸ್ ನಲ್ಲಿ ಭಾರತದ ಮಿಲಿಟರಿ ವತಿಯಿಂದ ಎರಡು ಹೆಲಿಕಾಪ್ಟರ್ ಮತ್ತು ಒಂದು ಏರ್ಕ್ರಾಫ್ಟ್ ನ ನಿರ್ವಹಣೆ ಆಗುತ್ತಿದೆ. ಒಟ್ಟು 88 ಮಂದಿ ಸಿಬ್ಬಂದಿ ಇದರಲ್ಲಿ ತೊಡಗಿದ್ದಾರೆ. ಮಾನವ ರಕ್ಷಣಾ ಕಾರ್ಯಗಳಿಗೆ ಇವುಗಳ ಬಳಕೆ ಆಗುತ್ತದೆ. ಈ ಎಲ್ಲಾ 88 ಭಾರತೀಯ ಮಿಲಿಟರಿ ಸಿಬ್ಬಂದಿಯಲ್ಲಿ ಒಬ್ಬರೂ ಕೂಡ ಇರಬಾರದು ಎಂದು ಮೊಹಮ್ಮದ್ ಮುಯಿಜು ಮಾಲ್ಡೀವ್ಸ್ ಅಧ್ಯಕ್ಷರಾಗಿ ಬಂದ ದಿನವೇ ಘಂಟಾಘೋಷವಾಗಿ ಆಜ್ಞೆ ಮಾಡಿದ್ದಾರೆ.
ಮಾಲ್ಡೀವ್ಸ್ ನಿರ್ಧಾರಕ್ಕೆ ಭಾರತ ತನ್ನ ಸೇನಾ ಸಿಬ್ಬಂದಿಯನ್ನು ಹಿಂದಕ್ಕೆ ಕರೆಸಿಕೊಳ್ಳಲು ಒಪ್ಪಿಗೆ ನೀಡಿತ್ತು. ಆದರೆ ಸೇನೆಯಲ್ಲಿನ ನಾಗರಿಕ ವಿಭಾಗದ ಅಧಿಕಾರಿಗಳನ್ನು 1 ವಾರದ ಹಿಂದೆ ಅಲ್ಲಿಗೆ ಕಳುಹಿಸಿತ್ತು.
ಈ ವಿಚಾರವನ್ನೇ ಭಾಷಣದಲ್ಲಿ ಪ್ರಸ್ತಾಪ ಮಾಡಿದ ಮುಯಿಝು, ನಮ್ಮ ಸೂಚನೆ ಹೊರತಾಗಿಯೂ ಭಾರತದ ಸೈನಿಕರು ಮಾಲ್ಡೀವ್ಸ್ ತೊರೆಯಲು ಸಿದ್ಧರಿಲ್ಲ. ತಮ್ಮ ಸೇನಾ ಸಮವಸ್ತ್ರ ಬಿಚ್ಚಿಟ್ಟು ನಾಗರಿಕ ಉಡುಪು ಹಾಕಿಕೊಂಡು ಮಾರು ವೇಷದಲ್ಲಿ ಬರುತ್ತಿದ್ದಾರೆ. ಇದಕ್ಕೆ ನಾನು ಅವಕಾಶ ಕೊಡುವುದಿಲ್ಲ ಎಂದು ಹೇಳಿದ್ದಾರೆ.
