ನವದೆಹಲಿ, 11 ಫೆಬ್ರವರಿ :
ಆ್ಯಂಕರ್: ಜನಸಂಘದ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಪುಣ್ಯತಿಥಿಯಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದು, ಭಾರತೀಯ ಸಂಸ್ಕøತಿ ಮತ್ತು ಪರಂಪರೆಯನ್ನು ಉಳಿಸಿಕೊಂಡು ದೇಶವನ್ನು ಮುನ್ನಡೆಸುವ ಹಾದಿಯನ್ನು ದೀನದಯಾಳ್ ನಮಗೆ ತೋರಿಸಿದ್ದಾರೆ ಎಂದು ಹೇಳಿದ್ದಾರೆ. ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವಲ್ಲಿ ದಯಾಳ್ ತೋರಿಸಿರುವ ಮಾರ್ಗ ನಮಗೆ ಸೂರ್ತಿಯಾಗಿವೆ ಎಂದು ಮೋದಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ದಯಾಳ್ ಅವರ ಅಂತ್ಯೋದಯ (ಅತ್ಯಂತ ಬಡವರ ಉನ್ನತಿ) ಮತ್ತು ಅವಿಭಾಜ್ಯ ಮಾನವತಾವಾದ ದ ವಿಚಾರಗಳನ್ನು ಮೋದಿಯವರು ತಮ್ಮ ಆಡಳಿತ ಮಾದರಿಗೆ ಸೂರ್ತಿ ಎಂದು ಹೆಚ್ಚಾಗಿ ಉಲ್ಲೇಖಿಸಿದ್ದಾರೆ. ಉಪಾಧ್ಯಾಯ 1968 ರಲ್ಲಿ ನಿಧನರಾದರು.
