
ಬಳ್ಳಾರಿ, 11 ಫೆಬ್ರವರಿ:
ಆ್ಯಂಕರ್ : ಸುಕೋ ಬ್ಯಾಂಕ್ ಮತ್ತು ಶ್ರೀರಾಮ ಲೈಫ್ ಇನ್ಶ್ಯೂರೆನ್ಸ್ ಕಂಪನಿ ವಿಮಾ ಯೋಜನೆಗಳ ಜಾರಿಗಾಗಿ ಒಡಂಬಡಿಕೆಗೆ ಸಹಿ ಹಾಕಿವೆ.
ಈ ಒಡಂಬಡಿಕೆಯ ಪ್ರಕಾರ ಸುಕೋ ಬ್ಯಾಂಕ್ನಿಂದ ಬ್ಯಾಂಕ್ನಿಂದ ಸಾಲ ಪಡೆದ ಅಥವಾ ಸಾಲ ಪಡೆದು ಲೈಫ್ ಇನ್ಶ್ಯೂರೆನ್ಸ್ ಸೌಲಭ್ಯಕ್ಕೆ ಒಳಪಡುವ ಗ್ರಾಹಕರ ಜೀವಕ್ಕೆ `ಆಕಸ್ಮಿಕ’ಗಳು ಸಂಭವಿಸಿದಲ್ಲಿ ಆ ಸಾಲದ ಮೊತ್ತವನ್ನು ಇನ್ಶ್ಯೂರೆನ್ಸ್ ಕಂಪನಿ ಪಾವತಿಸಲಿದೆ.
ಸುಕೋ ಬ್ಯಾಂಕಿನ ಅಧ್ಯಕ್ಷ ಮೋಹಿತ್ ಮಸ್ಕಿ ಅವರ ಸಮ್ಮುಖದಲ್ಲಿ ಸುಕೋ ಬ್ಯಾಂಕ್ನ ವ್ಯವಸ್ಥಾಪಕ ನಿರ್ದೇಶಕ ಜಿ.ಎಸ್. ರವಿಸುಧಾಕರ ಮತ್ತು ಶ್ರೀರಾಮ ಇನ್ಶ್ಯೂರೆನ್ಸ್ ಕಂಪನಿಯ ಎಕ್ಸಿಕ್ಯೂಟಿವ್ ವೈಸ್ಪ್ರೆಸಿಡೆಂಟ್ ಲಿಯೋನೆಲ್ ಫರ್ನಾಂಡಿಸ್ ಅವರು ಒಡಂಬಿಡಿಕೆಗೆ ಸಹಿ ಹಾಕಿದ್ದಾರೆ.
ಸುಕೋ ಬ್ಯಾಂಕಿನ ನಿರ್ದೇಶಕರಾದ ಶ್ರೀಮತಿ ಸಾವಿತ್ರಿ ಮಸ್ಕಿ, ಸುಕೋ ಬ್ಯಾಂಕಿನ ಸಲಹೆಗಾರಾದ ಎಂ.ಆರ್. ಗಿರೀಶ್, ಶ್ರೀರಾಮ ಇನ್ಶೂರೆನ್ಸ್ನ ಹಿರಿಯ ಅಧಿಕಾರಿಗಳಾದ ರಾಮಕುಮಾರ, ರಾಜೇಶಗೋಪುರಾಜ, ಆದೇಶ, ವಸಂತರೆಡ್ಡಿ, ಗೌರವ, ಕಲ್ಯಾಣ, ಮೀನು ಚೋಪ್ರ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
