ನವದೆಹಲಿ, 15 ಫೆಬ್ರವರಿ :
ಆ್ಯಂಕರ್:ರಾಷ್ಟ್ರ ರಾಜಧಾನಿಯಲ್ಲಿ ಅನ್ನದಾತರ ದೆಹಲಿ ಚಲೋ 3ನೇ ದಿನಕ್ಕೆ ಕಾಲಿಟ್ಟಿದೆ. ದೆಹಲಿಯ ಗಡಿಗಳಲ್ಲಿ ಭಾರಿ ಬಿಗಿಭದ್ರತೆ ಮುಂದುವರಿಸಲಾಗಿದೆ. ಭದ್ರತಾ ಪಡೆಗಳ ಬ್ಯಾರಿಕೇಡ್ ರೈತರಿಗೆ ತಡೆ ಹಾಕಿದೆ. ರೈತರು ದೆಹಲಿಯೊಳಗೆ ನುಗ್ಗದಂತೆ ಉಕ್ಕಿನ ಕೋಟೆ ನಿರ್ಮಾಣವಾಗಿದೆ. ಕೇಂದ್ರ ಸರ್ಕಾರ-ರೈತರ ಮುಖಂಡರ ಮಾತುಕತೆ ವಿಫಲ ಆಗಿದ್ದು, ಇವತ್ತು ಮತ್ತೊಮ್ಮೆ ಮಾತುಕತೆ ನಡೆಯಲಿದೆ.
ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ರೈತರು ನಡೆಸ್ತಿರುವ ದೆಹಲಿ ಚಲೋ ಕಿಚ್ಚು ಧಗಧಗಿಸ್ತಿದೆ. ದೇಶದ ಮೂಲೆಮೂಲೆಗಳಿಂದ ದೆಹಲಿಯತ್ತ ನುಗ್ಗುತ್ತಿರುವ ರೈತರನ್ನು ತಡೆಯಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸಿಂಘು, ಟಿಕ್ರಿ ಹಾಗೂ ಘಾಜಿಪುರದಲ್ಲಿ ಗಡಿಗಳಿಗೆ ಬ್ಯಾರಿಕೇಡ್ ಹಾಕಿ ಹೆಚ್ಚಿನ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಾಗಿದೆ.
ಡ್ರೋಣ್ ಉರುಳಿಸಲು ರೈತರಿಂದ ಗಾಳಿಪಟ ಅಸ್ತ್ರ!
ದೆಹಲಿ-ಹರಿಯಾಣ ಗಡಿ ಪ್ರದೇಶ ಶಂಭುವಿನಲ್ಲಿ ರೈತರ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಡ್ರೋಣ್ ಮೂಲಕ ಅಶ್ರುವಾಯು ಪ್ರಯೋಗಿಸಿದ್ದರು. ಪ್ರತಿಭಟನಾಕಾರರು ಗಾಳಿಪಟಗಳ ಸಹಾಯದಿಂದ ಡ್ರೋಣ್ ಉರುಳಿಸಲು ಯತ್ನಿಸಿದ್ದಾರೆ.
ಕೇಂದ್ರ ಸರ್ಕಾರ, ರೈತರ ಮುಖಂಡರ ಮಾತುಕತೆ ವಿಫಲ
ನಿನ್ನೆ ರೈತ ಮುಖಂಡರುಗಳ ಜೊತೆ ಕೇಂದ್ರ ಸರ್ಕಾರ ಮಾತುಕತೆ ನಡೆಸಿತ್ತು. ಆದ್ರೆ ಮಾತುಕತೆ ಸಫಲ ಆಗಿಲ್ಲ.. ರೈತರ ಬೇಡಿಕೆಗೆ ಕೇಂದ್ರ ಸರ್ಕಾರ ಮಣೆ ಹಾಕುತ್ತಿಲ್ಲ.. ಹೀಗಾಗಿ ಇವತ್ತು ರೈತರ ಜೊತೆ 3ನೇ ಸುತ್ತಿನ ಮಾತುಕತೆಯನ್ನು ಸರ್ಕಾರ ನಿಗದಿಪಡಿಸಿದೆ.. ಇನ್ನು ಕೇಂದ್ರ ಸರ್ಕಾರದ ಜೊತೆ ಮಾತುಕತೆಯ ಬಳಿಕ ದೆಹಲಿ ಚಲೋ ಮುಂದುವರಿಸುವ ನಿರ್ಧಾರ ಮಾಡ್ತೀವಿ ಅಂತ ರೈತ ಮುಖಂಡರು ಹೇಳಿದ್ದಾರೆ.. ಆದ್ರೆ ನಮ್ಮ ಬೇಡಿಕೆಗಳ ವಿಚಾರದಲ್ಲಿ ಯಾವುದೇ ರಾಜೀ ಮಾಡಿಕೊಳ್ಳಲ್ಲ ಅಂತ ಕೇಂದ್ರಕ್ಕೆ ಖಡಕ್ ಸಂದೇಶ ರವಾನಿಸಿದ್ದಾರೆ.
