ನವದೆಹಲಿ, 19 ಆಗಸ್ಟ್ (ಹಿ.ಸ.):
ಆ್ಯಂಕರ್:ಭಾರತ ಭೇಟಿಯ ಎರಡನೇ ದಿನವಾದ ಇಂದು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರನ್ನು ಭೇಟಿ ಮಾಡಿದ ನಂತರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿದ್ದಾರೆ.
ಗಡಿ ವಿವಾದದ ಕುರಿತು ವಿಶೇಷ ಪ್ರತಿನಿಧಿಗಳ ಹೊಸ ಸುತ್ತಿನ ಸಂವಾದಕ್ಕಾಗಿ ವಾಂಗ್ ಯಿ ಅವರ ಭೇಟಿ ಮಹತ್ವದಾಗಿದ್ದು, ವಾಂಗ್ ಯಿ ಮತ್ತು ಅಜಿತ್ ದೋವಲ್ ಎರಡೂ ದೇಶಗಳ ನಡುವಿನ ಗಡಿ ಮಾತುಕತೆಯಲ್ಲಿ ವಿಶೇಷ ಪ್ರತಿನಿಧಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಶಾಂಘೈ ಸಹಕಾರ ಸಂಸ್ಥೆಯ ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸಲಿರುವ ಸಂದರ್ಭದಲ್ಲಿ ಚೀನಾದ ವಿದೇಶಾಂಗ ಸಚಿವರ ಭಾರತ ಭೇಟಿ ಮಹತ್ವದ್ದಾಗಿದೆ. ಜೂನ್ 2020 ರಲ್ಲಿ ನಡೆದ ಗಾಲ್ವಾನ್ ಕಣಿವೆ ಘರ್ಷಣೆಯ ನಂತರ ಉಭಯ ದೇಶಗಳ ನಡುವಿನ ಸಂಬಂಧವನ್ನು ಸುಧಾರಿಸುವ ಪ್ರಯತ್ನಗಳ ಭಾಗವೂ ಇದಾಗಿದೆ. ಸೋಮವಾರ ತಮ್ಮ ಭೇಟಿಯ ಮೊದಲ ದಿನದಂದು ವಾಂಗ್ ಯಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರನ್ನು ಭೇಟಿಯಾದರು, ಇದರಲ್ಲಿ ಜೈಶಂಕರ್ ಅವರು ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಒಟ್ಟಿಗೆ ಕಾಯ್ದುಕೊಂಡಾಗ ಮಾತ್ರ ಬಲವಾದ ಸಂಬಂಧಗಳ ಅಡಿಪಾಯ ಹಾಕಬಹುದು ಎಂದು ಹೇಳಿದರು.
—————
ಹಿಂದೂಸ್ತಾನ್ ಸಮಾಚಾರ್ / Rakesh Mahadevappa
