ಬಳ್ಳಾರಿ, 14 ಫೆಬ್ರವರಿ :
ಆ್ಯಂಕರ್ : ಸರ್ಕಾರದಿಂದ ದೊರೆಯುವ ಮಾಸಿಕ ಪಿಂಚಣಿ ಕೇವಲ ರೂಪಾಯಿ 1,400/-ಗಳಾಗಿದ್ದು ಜೀವನ ನಿರ್ವಹಣೆ ಬಹಳ ಕಷ್ಟವಾಗುತ್ತಿದೆ ಕಾರಣ, ಈ ಮೊತ್ತವನ್ನು 3000 ದಿಂದ 5000 ಕ್ಕೆ ಹೆಚ್ಚಿಸಬೇಕು ಎಂದು ಬಳ್ಳಾರಿ ಜಿಲ್ಲಾ ಅಂಗವಿಕಲರ ಸಮಿತಿ ಹಾಗೂ ಪಾಲಕರ ಒಕ್ಕೂಟ ಆಗ್ರಹಿಸಿದೆ.
ಬಳ್ಳಾರಿ ಜಿಲ್ಲಾ ಅಂಗವಿಕಲರ ಸಮಿತಿ ಹಾಗೂ ಪಾಲಕರ ಒಕ್ಕೂಟದ ಪದಾಧಿಕಾರಿಗಳು, ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ, ವಿಕಲಚೇತರನ ಮಕ್ಕಳ ಶಿಕ್ಷಣಕ್ಕೂ ಸರ್ಕಾರ ನೆರವು ನೀಡಬೇಕು. ವಿಕಲಚೇತನರು ಕೆಲಸ ಮಾಡಬಹುದಾದ ಕೆಲಸಗಳನ್ನು ನೀಡಬೇಕು. ಶೇಕಡ 75ಕ್ಕೂ ಹೆಚ್ಚು ಅಂಗ ವೈಕಲ್ಯತೆ ಇರುವವರಿಗೆ `ರೆಟ್ರೋಫಿಟೆಡ್ ವಾಹನ’ವನ್ನು ನೀಡಬೇಕು ಎಂದು ಅವರು ಮನವಿ ಮಾಡಿದರು.
ಬಳ್ಳಾರಿ ಜಿಲ್ಲಾ ಅಂಗವಿಕಲರ ಸಮಿತಿ ಹಾಗೂ ಪಾಲಕರ ಒಕ್ಕೂಟದ ಜಿಲ್ಲಾ ಮುಖಂಡರಾದ ಎನ್. ಕುಮಾರ್, ತಾಲೂಕು ಅಧ್ಯಕ್ಷತೆ ಪಾರ್ವತಿಬಾಯಿ, ಪ್ರಧಾನ ಕಾರ್ಯದರ್ಶಿ ನಾಗರಾಜ್ ಹಾಗೂ ವೀರೇಶ್, ವೆಂಕಟಲಕ್ಷ್ಮಿ, ಕುಮಾರ್ ಇನ್ನಿತರರು ಈ ಸಂದರ್ಭದಲ್ಲಿದ್ದರು.
