ನವದೆಹಲಿ, 5 ಫೆಬ್ರವರಿ :
ಆ್ಯಂಕರ್ :
ಲೋಕಸಭೆ ಮತ್ತು ರಾಜ್ಯಸಭೆಯ ಜಂಟಿ ಅಧಿವೇಶನವನ್ನುದ್ದೇಶಿಸಿ ರಾಷ್ಟ್ರಪತಿ ಅವರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆಯನ್ನು ಸಂಸತ್ತಿನ ಉಭಯ ಸದನಗಳು ಇಂದು ಪುನರಾರಂಭಿಸಲಿದೆ. ಲೋಕಸಭೆಯಲ್ಲಿ ವಂದನಾ ನಿರ್ಣಯಕ್ಕೆ ಪ್ರಧಾನಿ ನರೇಂದ್ರ ಮೋದಿ ಇಂದು ಉತ್ತರಿಸುವ ನಿರೀಕ್ಷೆಯಿದೆ.ಹೀಗಾಗಿ ಸದನದಲ್ಲಿ ಹಾಜರಿರುವಂತೆ ವಂದನಾ ನಿರ್ಣಯಕ್ಕೆ ಪ್ರಧಾನಿ ಉತ್ತರಿಸುವ ಮೊದಲು ಬಿಜೆಪಿ, ಸಂಸದರಿಗೆ ೩ ಸಾಲಿನ ವಿಪ್ ಜಾರಿ ಮಾಡಿದೆ.
