ನವದೆಹಲಿ, 18 ಡಿಸೆಂಬರ್(ಹಿ.ಸ):
ಆ್ಯಂಕರ್ :
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದಿನಿಂದ ಪಶ್ಚಿಮ ಬಂಗಾಳ, ತೆಲಂಗಾಣ ಮತ್ತು ರಾಜಸ್ಥಾನಕ್ಕೆ ಆರು ದಿನಗಳ ಭೇಟಿ ನೀಡಲಿದ್ದಾರೆ. ರಾಷ್ಟ್ರಪತಿ ಅವರು ಇಂದು ಪಶ್ಚಿಮ ಬಂಗಾಳದ ಐಐಟಿ ಖರಗ್ ಪುರದ ೬೯ ನೇ ಘಟಿಕೋತ್ಸವದಲ್ಲಿ ಭಾಗವಹಿಸಲಿದ್ದು, ನಂತರ ತೆಲಂಗಾಣದ ಸಿಕಂದರಾಬಾದ್ ನಲ್ಲಿರುವ ರಾಷ್ಟ್ರಪತಿ ನಿಲಯಂಗೆ ಭೇಟಿ ನೀಡಲಿದ್ದಾರೆ. ನಾಳೆ ಅವರು ಹೈದರಾಬಾದ್ ಪಬ್ಲಿಕ್ ಸ್ಕೂಲ್ ಸೊಸೈಟಿಯ ಶತಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ರಾಷ್ಟ್ರಪತಿ, ತಮ್ಮ ವಾರ್ಷಿಕ ದಕ್ಷಿಣ ಪ್ರವಾಸದ ಭಾಗವಾಗಿ ಹೈದರಾಬಾದ್ ಗೆ ಭೇಟಿ ನೀಡಲಿದ್ದಾರೆ. ತೆಲಂಗಾಣದ ಯಾದಾದ್ರಿ ಭುವನಗಿರಿ ಜಿಲ್ಲೆಯ ಪೋಚಂಪಲ್ಲಿಯಲ್ಲಿ ಜವಳಿ ಸಚಿವಾಲಯ ಆಯೋಜಿಸಿರುವ ಕೈಮಗ್ಗ ಮತ್ತು ನೂಲುವ ಘಟಕ ಮತ್ತು ಥೀಮ್ ಪೆವಿಲಿಯನ್ ಗೆ ರಾಷ್ಟ್ರಪತಿ ನಾಳೆ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಅವರು ನೇಕಾರರೊಂದಿಗೆ ಸಂವಾದ ನಡೆಸಲಿದ್ದಾರೆ. ಅದೇ ದಿನ ಸಂಜೆ ಸಿಕಂದರಾಬಾದ್ ನಲ್ಲಿ ಎಂ.ಎನ್. ಆರ್. ಎಜುಕೇಷನಲ್ ಟ್ರಸ್ಟ್ ನ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ರಾಷ್ಟ್ರಪತಿ ಪಾಲ್ಗೊಳ್ಳಲಿದ್ದಾರೆ. ರಾಷ್ಟ್ರಪತಿ ನಿಲಯಂನಲ್ಲಿ ರಾಷ್ಟ್ರಪತಿ ಇದೇ ೨೧ರಂದು ವಿವಿಧ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ನಂತರ ಅವರು, ೨೨ರಂದು, ರಾಜ್ಯದ ಗಣ್ಯರು, ಪ್ರಮುಖ ನಾಗರಿಕರು, ಶಿಕ್ಷಣ ತಜ್ಞರು ಇತರರಿಗಾಗಿ ಮನೆಯಲ್ಲಿ ಸ್ವಾಗತವನ್ನು ಆಯೋಜಿಸಲಿದ್ದಾರೆ. ರಾಷ್ಟ್ರಪತಿ ಅವರು ಇದೇ ೨೩ರಂದು ರಾಜಸ್ಥಾನದ ಪೋಖ್ರಾನ್ ಗೆ ಭೇಟಿ ನೀಡಲಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
