ಬೆಂಗಳೂರು, 18 ಡಿಸೆಂಬರ್(ಹಿ.ಸ):
ಆ್ಯಂಕರ್ :
ಸಿಲಿಕಾನ್ ಸಿಟಿ ಸೇರಿದಂತೆ ಹಲವು ಕಡೆ ಇಂದು ಸಂಪೂರ್ಣ ಮೋಡ ಕವಿದ ವಾತಾವರಣವಿದೆ. ಭಾನುವಾರದಿಂದ ಬೆಂಗಳೂರು ಸೇರಿದಂತೆ ರಾಜ್ಯದ ಕರಾವಳಿ ಹಾಗೂ ದಕ್ಷಿಣ ಭಾಗದಲ್ಲಿ ಸೂರ್ಯ ಕಂಡಿದ್ದೇ ಇಲ್ಲ. ದಿನವಿಡೀ ಕೂಲ್ ಕೂಲ್ ವಾತಾವರಣ ಮುಂದುವರಿದಿದೆ.
ಕರಾವಳಿಯ ಕೆಲ ಜಿಲ್ಲೆಗಳಲ್ಲಿ ಸಾಧಾರಣ ಮಳೆ ( ಸಹ ಆಗಿದೆ. ಇದಕ್ಕೆ ಕಾರಣ ತಮಿಳುನಾಡು ಕೇರಳ ಸಮುದ್ರ ಭಾಗದಲ್ಲಿನ ಮೇಲ್ಮೈ ಸುಳಿಗಾಳಿ ಎಫೆಕ್ಟ್. ಡಿಸೆಂಬರ್ 18 ಮತ್ತು 19ರಂದು ತಮಿಳುನಾಡು ಮತ್ತು ಕೇರಳದ ದಕ್ಷಿಣ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದ್ದು, ಈ ಹಿನ್ನೆಲೆ ಭಾರತೀಯ ಹವಾಮಾನ ಇಲಾಖೆ ಇದೀಗ ಎರಡು ರಾಜ್ಯಗಳಿಗೆ ಆರೆಂಜ್ ಅಲರ್ಟ್ ಘೋಷಿಸಿದೆ. ಇದೆ ಎಫೆಕ್ಟ್ ರಾಜ್ಯದ ಕೆಲವು ಕಡೆ ಆಗಿದೆ. ಇದರಿಂದಾಗಿ ಬೆಂಗಳೂರು ಕೂಲ್ ಸಿಟಿಯಾಗಿದೆ.
ಹಿಂದೂಸ್ತಾನ್ ಸಮಾಚಾರ್
