ನವದೆಹಲಿ,28ನವೆಂಬರ್ (ಹಿ.ಸ):
ಆ್ಯಂಕರ್ :
ಅಯೋಧ್ಯೆ ರಾಮಮಂದಿರ ಜನವರಿ 22ರಂದು ಲೋಕಾರ್ಪಣೆಗೊಳ್ಳಲಿದ್ದು, ಪ್ರಧಾನಿ ಮೋದಿ ಅವರು ಈ ಕಾರ್ಯವನ್ನು ಮಾಡಲಿದ್ದಾರೆ. ಇನ್ನು ರಾಮಮಂದಿರ ನಿರ್ಮಾಣದಲ್ಲಿ ಪ್ರತಿಯೊಬ್ಬ ಹಿಂದೂವಿನ ಪ್ರತ್ಯಕ್ಷ ಮತ್ತು ಪರೋಕ್ಷವಾದ ಶ್ರಮವಿದೆ ಎಂದು ರಾಮ ಮಂದಿರ ಟ್ರಸ್ಟ್ ಹೇಳಿದೆ. ಈ ಕಾರಣಕ್ಕೆ 10 ಕೋಟಿ ಜನರು ಈ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇದೀಗ ಇದರ ಜತೆಗೆ ರಾಮಮಂದಿರದ ವಿಚಾರಧಾರೆಗಳು ಹಾಗೂ ಲೋಕಾರ್ಪಣೆ ಸಮಯದಲ್ಲಿ ರಾಮ ಕಥೆಗಳು ಪ್ರತಿ ಮನೆ ಮನೆಗೆ ತಲುಪುವ ನಿಟ್ಟಿನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ಮತ್ತು ಅದರ ಅಂಗಸಂಸ್ಥೆಗಳು ಜನವರಿ 1 ರಿಂದ ಜನವರಿ 15 ರವರೆಗೆ “ರಾಮ ಸಂದೇಶ ಮನೆಯಿಂದ ಮನೆಗೆ” ಎಂಬ ಅಭಿಯಾನದ ಮೂಲಕ ತಲುಪಿಸುವ ಕೆಲಸ ಮಾಡಲಿದ್ದಾರೆ ಎಂದು ಹೇಳಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
