ಹುಬ್ಬಳ್ಳಿ, 22 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಈ ವರ್ಷದ ದೀಪಾವಳಿ ಭಾರತದ ಆರ್ಥಿಕತೆಗೆ ಹೊಸ ಉತ್ಸಾಹ ತುಂಬಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪ್ರಕಟಿಸಿದ ಸಂದೇಶದಲ್ಲಿ ಅವರು, “ನವಭಾರತದ ಈ ದೀಪಾವಳಿ ಸ್ವದೇಶಿಯನ್ನು ಎತ್ತಿಹಿಡಿದಿದೆ. ದಾಖಲೆಯ ಆರ್ಥಿಕ ಚಟುವಟಿಕೆಗಳು ಈ ಬಾರಿ ದೀಪಾವಳಿಯ ವೈಶಿಷ್ಟ್ಯವಾಗಿವೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕರೆಯಂತೆ ಸ್ವದೇಶಿ ಉತ್ಪನ್ನಗಳ ಖರೀದಿ ಮತ್ತು ಜಿಎಸ್‌ಟಿ ಕಡಿತದಿಂದ ವ್ಯಾಪಾರ ವಲಯದಲ್ಲಿ ಹೊಸ ಚೈತನ್ಯ ಮೂಡಿದೆ,” ಎಂದು ಹೇಳಿದ್ದಾರೆ.
“ಸ್ಥಳೀಯ ಉತ್ಪಾದಕರಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿದೆ. ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಮಹತ್ತರ ಬೆಂಬಲ ದೊರೆತಿದೆ. ಈ ಹಬ್ಬದ ಕಾಲದಲ್ಲಿ ಸುಮಾರು 50 ಲಕ್ಷ ತಾತ್ಕಾಲಿಕ ಉದ್ಯೋಗಗಳು ನಿರ್ಮಾಣವಾಗಿವೆ,” ಎಂದು ಉಲ್ಲೇಖಿಸಿದ್ದಾರೆ.
ಗ್ರಾಹಕರು ಸ್ವದೇಶಿ ಉತ್ಪನ್ನಗಳತ್ತ ತಿರುಗುತ್ತಿರುವುದು ‘ಆತ್ಮನಿರ್ಭರ ಭಾರತ’ದ ಕನಸಿಗೆ ಬಲ ನೀಡುತ್ತಿದೆ ಎಂದು ಜೋಶಿ ಅಭಿಪ್ರಾಯಪಟ್ಟಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa
