ನವದೆಹಲಿ,22ನವೆಂಬರ್ (ಹಿ.ಸ):
ಆ್ಯಂಕರ್ :
ಪ್ರಧಾನಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಇಂದು ವರ್ಚುವಲ್ ಜಿ-೨೦ ಶೃಂಗಸಭೆ ನಡೆಯಲಿದೆ. ದೆಹಲಿಯಲ್ಲಿಂದು ಶೃಂಗಸಭೆಯ ಕುರಿತು ಮಾಧ್ಯಮಗಳಿಗೆ ವಿವರ ನೀಡಿದ ಜಿ-೨೦ ಶೆರ್ಪಾ ಅಮಿತಾಬ್ ಕಾಂತ್, ಎರಡೂವರೆ ತಿಂಗಳಲ್ಲಿ ಪ್ರಧಾನಿ ಅವರು, ಎರಡನೇ ಬಾರಿ ಜಿ-೨೦ ನಾಯಕರ ಸಭೆಯನ್ನು ಆಯೋಜಿಸಿದ್ದಾರೆ. ಇದು ಜಾಗತಿಕ ಮಟ್ಟದಲ್ಲಿ ಭಾರತದ ಶಕ್ತಿ ಮತ್ತು ನರೇಂದ್ರ ಮೋದಿ ಅವರ ನಾಯಕತ್ವ ಬಿಂಬಿಸುತ್ತದೆ ಎಂದು ಹೇಳಿದರು. ಕಳೆದ ಸೆಪ್ಟೆಂಬರ್ನಲ್ಲಿ ೧೦ರಂದು ದೆಹಲಿಯಲ್ಲಿ ನಡೆದ ಜಿ-೨೦ ಶೃಂಗಸಭೆಯ ಮುಕ್ತಾಯ ಅಧಿವೇಶನದಲ್ಲಿ ಪ್ರಧಾನಿ ಅವರು, ಜಿ-೨೦ ನಾಯಕರ ವರ್ಚುವಲ್ ಶೃಂಗಸಭೆಯನ್ನು ಆಯೋಜಿಸುವುದಾಗಿ ಪ್ರಕಟಿಸಿದ್ದರು. ಈ ತಿಂಗಳ ೩೦ರ ವರೆಗೆ ಭಾರತ ಜಿ-೨೦ ಅಧ್ಯಕ್ಷತೆಯನ್ನು ವಹಿಸಿದೆ.
ಹಿಂದೂಸ್ತಾನ್ ಸಮಾಚಾರ್
