ದೆಹಲಿ, 11 ಜನವರಿ(ಹಿ.ಸ):
ಆ್ಯಂಕರ್ :
ನಿರುದ್ಯೋಗ, ಆರ್ಥಿಕತೆ ಸಮಸ್ಯೆ ಹಿನ್ನೆಲೆಯಲ್ಲಿ ಜಾಗತಿಕ ನಿರುದ್ಯೋಗ ದರ ಶೇಕಡ ೫.೨ರಷ್ಟು ತಲುಪುವ ಸಾಧ್ಯತೆ ಇದೆ ಎಂದು ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆ-ಐಎಲ್ಒ ಹೇಳಿದೆ.
೨೦೨೪ರ ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆಯ ವರ್ಲ್ಡ್ ಎಪ್ಲಾಯ್ಮೆಂಟ್ ಅಂಡ್ ಸೋಷಿಯಲ್ ಔಟ್ಲುಕ್ ಕುರಿತ ವರದಿಯಲ್ಲಿ ಈ ವಿಷಯ ತಿಳಿಸಿದ್ದು, ನಿರುದ್ಯೋಗ ಪ್ರಮಾಣ ಎರಡು ಶತಕೋಟಿಗೆ ಏರಿಕೆಯಾಗುವ ಸಾಧ್ಯತೆ ಇದೆ. ಇದರಿಂದಾಗಿ ೨೦೨೩ರಲ್ಲಿ ಇದ್ದ ನಿರುದ್ಯೋಗ ದರ ಶೇಕಡ ೫.೧ ರಿಂದ ಶೇಕಡ ೫.೨ಕ್ಕೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ.
ವಿಶ್ವಸಂಸ್ಥೆಯ ಸಂಸ್ಥೆಯಾಗಿರುವ ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆ ಕೋವಿಡ್ ಸಾಂಕ್ರಾಮಿಕ ರೋಗ, ಉತ್ಪಾದನಾ ಬೆಳವಣಿಗೆ ಸೇರಿದಂತೆ ವಿವಿಧ ವಿಷಯಗಳನ್ನು ಗಣನೆಗೆ ತೆಗೆದುಕೊಂಡು ಈ ವರದಿ ಸಿದ್ಧಪಡಿಸಿದೆ.
ಹಿಂದೂಸ್ತಾನ್ ಸಮಾಚಾರ್
