ನವದೆಹಲಿ, 1 ಫೆಬ್ರವರಿ :
ಆ್ಯಂಕ್ಯರ್ :ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ನಲ್ಲಿ 2024ನೇ ಸಾಲಿನ ಬಜೆಟ್ ಮಂಡಿಸುತ್ತಿದ್ದಾರೆ. ಸತತ ಆರನೇ ಬಾರಿಗೆ ಸೀತಾರಾಮನ್ ಬಜೆಟ್ ಮಂಡನೆ ಮಾಡ್ತಿದ್ದು ನಿರೀಕ್ಷೆಗಳು ಹೆಚ್ಚಾಗಿವೆ. ಯಾಕಂದರೆ ಚುನಾವಣೆ ವರ್ಷ ಹಿನ್ನೆಲೆಯಲ್ಲಿ ಮೋದಿ ನೇತೃತ್ವದ ಎನ್ಡಿಎ ಒಕ್ಕೂಟ ಹ್ಯಾಟ್ರಿಕ್ ಗೆಲುವಿನ ತಂತ್ರದಲ್ಲಿದೆ. ಹೀಗಾಗಿ ಬಂಪರ್ ಯೋಜನೆಗಳನ್ನು ಬಜೆಟ್ನಲ್ಲಿ ಘೋಷಣೆ ಮಾಡಲಿದ್ದಾರೆ.
ಬಜೆಟ್ ಹೈಲೈಟ್ಸ್
2024ರ ಲೋಕಸಭೆ ಚುನಾವಣೆಗೆ ಮುನ್ನ ಮಧ್ಯಂತರ ಬಜೆಟ್
ಮಧ್ಯಂತರ ಬಜೆಟ್ 2024-25ನ್ನ ಮಂಡಿಸುತ್ತಿದ್ದೇನೆ- ನಿರ್ಮಲಾ ಸೀತಾರಾಮನ್
ಪಿಎಂ ಆವಾಸ್ ಯೋಜನೆಯಲ್ಲಿ 3 ಕೋಟಿ ಮನೆಗಳನ್ನು ನಿರ್ಮಾಣ ಮಾಡಲಾಗುವುದು
ಮುಂದಿನ 5 ವರ್ಷಗಳಲ್ಲಿ ಬಡವರಿಗಾಗಿ ಒಟ್ಟು 3 ಕೋಟಿ ಮನೆಗಳು ನಿರ್ಮಾಣ
ಉನ್ನತ ಶಿಕ್ಷಣ ಪಡೆಯುತ್ತಿರುವ ಮಹಿಳೆಯರ ಸಂಖ್ಯೆ ದೇಶದಲ್ಲಿ ಹೆಚ್ಚಾಗಿದೆ
NEP ಮೂಲಕ ಯುವಕರ ಅಭಿವೃದ್ಧಿಗೆ ಹೆಚ್ಚಿನ ಹೊತ್ತು
ಭಾರತದ ಆರ್ಥಿಕತೆ ಹಲವು ಸಕಾರಾತ್ಮಕ ಬದಲಾವಣೆ ಕಂಡಿದೆ
ಭಾರತೀಯರು ಭವಿಷ್ಯವನ್ನ ಭರವಸೆಯೊಂದಿಗೆ ಎದುರು ನೋಡ್ತಿದ್ದಾರೆ
ನರೇಂದ್ರ ಮೋದಿ ನಾಯಕತ್ವ ವಹಿಸಿದಾಗ ಸಾಕಷ್ಟು ಸವಾಲುಗಳಿದ್ದವು
ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಮಂತ್ರದಿಂದ ಮುನ್ನಡೆಯುತ್ತಿದ್ದೇವೆ
ನಮ್ಮ ಆರ್ಥಿಕತೆ ಈಗ ಹೊಸ ಮಜಲುಗಳನ್ನ ಕಂಡುಕೊಳ್ಳುತ್ತಿದ್ದೇವೆ
ಹಿಂದೂಸ್ತಾನ್ ಸಮಾಚಾರ್
