ಚಿತ್ರದುರ್ಗ, 22 ಆಗಸ್ಟ್ (ಹಿ.ಸ.) :
ಆ್ಯಂಕರ್ : ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ.ಸಿ ವೀರೇಂದ್ರ ಪಪ್ಪಿ
ಮನೆಯ ಮೇಲೆ ಇಂದು ಬೆಳಗ್ಗೆ ಜಾರಿ ನಿರ್ದೇಶನಾಲಯ
ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಚಳ್ಳಕೆರೆ ನಗರದ ಹಳೆ ಟೌನ್ ನಲ್ಲಿರುವ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ನಾಲ್ಕು ಮನೆಗಳ ಮೇಲೆ ದಾಳಿ ಮಾಡಲಾಗಿದ್ದು ವೀರೇಂದ್ರ ಪಪ್ಪಿ ಅವರ ಸಹೋದರರಾದ ಕೆ ಸಿ ನಾಗರಾಜ್,ಕೆ.ಸಿ.ತಿಪ್ಪೇಸ್ವಾಮಿ ಅವರ ಮನೆ ಮೇಲೂ ಸಹ ದಾಳಿ ಮಾಡಲಾಗಿದ್ದು ಪರಿಶೀಲನೆ ಮಾಡಲಾಗುತ್ತಿದೆ.
ಜೊತೆಗೆ ವೀರೇಂದ್ರ ಪಪ್ಪಿ ಚಳ್ಳಕೆರೆ ನಿವಾಸ ಬೆಂಗಳೂರಿನ ಸಹಕಾರನಗರದ ಮನೆ ಸೇರಿ 15 ಕ್ಕೂ ಹೆಚ್ಚು ಜಾಗಗಳಲ್ಲಿ ದಾಳಿ ನಡೆಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa
