ಬೆಂಗಳೂರು, 22 ಆಗಸ್ಟ್ (ಹಿ.ಸ.) :
ಆ್ಯಂಕರ್ : ವಿಧಾನ ಸೌಧದಲ್ಲಿ ಇಂದು ನಡೆದ ಮುಂಗಾರಿನ ಅಧಿವೇಶನದ ಕೊನೆಯ ದಿನ, ಸರ್ಕಾರ ಮತ್ತೆ ಮಂಡಿಸಿದ್ದ ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ಮಸೂದೆ 2025 ವಿಧಾನ ಪರಿಷತ್ತಿನಲ್ಲಿ ಅಂಗೀಕೃತಗೊಂಡಿದೆ.
ಈ ಮಸೂದೆ ಎರಡು ದಿನಗಳ ಹಿಂದೆ ಪರಿಷತ್ತಿನಲ್ಲಿ ಮೂರು ಮತಗಳ ಅಂತರದಿಂದ ತಿರಸ್ಕೃತವಾಗಿತ್ತು. 23 ಸದಸ್ಯರು ಮಸೂದೆಗೆ ಬೆಂಬಲ ನೀಡಿದ್ದರೆ, ಬಿಜೆಪಿ-ಜೆಡಿಎಸ್ ಒಕ್ಕೂಟದ 26 ಸದಸ್ಯರು ವಿರೋಧಿಸಿದ್ದರು. ಇಂದು ಕಾನೂನು ಸಚಿವ ಹೆಚ್.ಕೆ. ಪಾಟೀಲ್ ಮಸೂದೆನ್ನು ಮತ್ತೆ ಮಂಡಿಸಿದ್ದು, ಬಹುಮತದಿಂದ ಅಂಗೀಕಾರವಾಗಿದೆ.
ತಿದ್ದುಪಡಿಯ ಪ್ರಮುಖ ಅಂಶಗಳು:
ಸರ್ಕಾರಿ ಸೌಹಾರ್ದ ಸಂಘಗಳ ನಾಮನಿರ್ದೇಶಿತ ಅಧಿಕಾರಿಗಳು, ಕಾರ್ಯನಿರ್ವಾಹಕರು ಹಾಗೂ ನಿರ್ದೇಶಕರು ಪ್ರತಿ ವರ್ಷ ತಮ್ಮ ಕುಟುಂಬದ ಆಸ್ತಿ ವಿವರಗಳನ್ನು ಘೋಷಣೆ ಮಾಡುವುದು ಕಡ್ಡಾಯ.
ಸಂಘಗಳ ಲೆಕ್ಕಪತ್ರಗಳನ್ನು ಕಡ್ಡಾಯ ಲೆಕ್ಕಪರಿಶೋಧಕರಿಂದ ಪರಿಶೀಲನೆ ಮಾಡಿಸಬೇಕು.
ಮಸೂದೆ ಕುರಿತು ಮಾತನಾಡಿದ ಸಚಿವ ಹೆಚ್.ಕೆ. ಪಾಟೀಲ್ ಅವರು, ಈ ಕ್ರಮವು ಸೌಹಾರ್ದ ಸಹಕಾರಿ ಮಂಡಳಿಗಳಲ್ಲಿ ಪಾರದರ್ಶಕತೆ ಹಾಗೂ ಹೊಣೆಗಾರಿಕೆ ಹೆಚ್ಚಿಸಲು ನೆರವಾಗಲಿದೆ ಎಂದು ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa
