ವಿಜಯಪುರ, 22 ಆಗಸ್ಟ್ (ಹಿ.ಸ.) :
ಆ್ಯಂಕರ್ : ಮನೆಯೊಳಗೆ ಬಾರಿ ಗಾತ್ರದ ಉಡಾಯೊಂದು ಬಂದಿರುವ ಘಟನೆ ವಿಜಯಪುರ ನಗರದ ಕೀರ್ತಿ ಕಾಲೋನಿಯಲ್ಲಿ ನಡೆದಿದೆ.
ಕೀರ್ತಿ ನಗರದ ನಿವಾಸಿ ಆರ್.ಎಂ.ಬಿರಾದಾರ ಎಂಬುವರ ಮನೆಗೆ ಉಡಾ ಹೊಕ್ಕಿ ಆತಂಕ ಮೂಡಿಸಿದೆ.
ಮನೆಯ ಶೌಚಾಲಯಲ್ಲಿ ಉಡಾ ಕಾಣಿಸಿಕೊಂಡಿದೆ. ಇದನ್ನು ನೋಡಿದ ಮನೆಯವರಲ್ಲಿ ಆತಂಕ ಸೃಷ್ಟಿಸಿದೆ.
ಮೊಸಳೆ ಆಕಾರದ ಸರಿಸೃಪವನ್ನು ಉಡಾ ಎಂದು ಕರೆಯುತ್ತಾರೆ. ವಿಜಯಪುರ ನಗರದಲ್ಲಿ ಇತ್ತಿಚೆಗೆ ಬಾರಿ ಮಳೆ ಆಗಿದೆ. ಇದರಿಂದ ಸರಿಸೃಪಗಳು ಬಿಲಗಳಿಂದ ಹೊರ ಬರುತ್ತಿವೆ.
ಬಿಸಿ ಪ್ರದೇಶಗಳನ್ನು ಪ್ರಾಣಿಗಳು ಆಯ್ಕೆ ಮಾಡಿಕೊಳ್ಳುತ್ತಿವೆ. ಅದಕ್ಕಾಗಿ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕಿದೆ.
ಹಿಂದೂಸ್ತಾನ್ ಸಮಾಚಾರ್ / jyothi deshpande
