ಢಾಕಾ, 1 ಮಾರ್ಚ್ :ಆ್ಯಂಕರ್:
ಬಾಂಗ್ಲಾದೇಶದ ಢಾಕಾದಲ್ಲಿರುವ 6 ಅಂತಸ್ತಿನ ಶಾಂಪಿಂಗ್ ಕಾಂಪ್ಲೆಕ್ಸ್ ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು 43 ಮಂದಿ ಸಜೀವದಹನವಾಗಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.
ಗುರುವಾರ ತಡರಾತ್ರಿ, ಢಾಕಾದ ಗದ್ದಲದ ಡೌನ್ ಟೌನ್ ಪ್ರದೇಶದಲ್ಲಿ ನೆಲೆಗೊಂಡಿರುವ ಗ್ರೀನ್ ಕೋಜಿ ಕಾಟೇಜ್ ಶಾಪಿಂಗ್ ಮಾಲ್ ಅನ್ನು ಜ್ವಾಲೆ ಆವರಿಸಿದೆ. ಮಾಲ್ ನ ಮೊದಲ ಮಹಡಿಯಲ್ಲಿರುವ ಜನಪ್ರಿಯ ರೆಸ್ಟೊರೆಂಟ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ, ಇದು ಕಟ್ಟಡದಾದ್ಯಂತ ವೇಗವಾಗಿ ಹರಡಿತು, ಅನೇಕರು ಒಳಗೆ ಸಿಲುಕಿಕೊಂಡರು.
