ಬೆಂಗಳೂರು, 1 ಮಾರ್ಚ್ :
ಆ್ಯಂಕರ್:ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಿನ್ನೆ ರಾತ್ರಿ ನಡೆದ ಮಹಿಳೆಯರ ಪ್ರೀಮಿಯರ್ ಲೀಗ್ ಟಿ-೨೦ ಕ್ರಿಕೆಟ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ ೨೫ ರನ್ಗಳಿಂದ ಜಯಗಳಿಸಿದೆ.
ಮೊದಲು ಬ್ಯಾಟ್ ಮಾಡಿದ ಡೆಲ್ಲಿ ತಂಡ ನಿಗದಿತ ೨೦ ಓವರ್ಗಳಲ್ಲಿ ೫ ವಿಕೆಟ್ ನಷ್ಟಕ್ಕೆ ೧೯೪ ರನ್ ಗಳಿಸಿತು.
ಡೆಲ್ಲಿ ಪರ ಶಫಾಲಿ ವರ್ಮಾ ೫೦, ಆಲಿಸ್ ಕ್ಯಾಪ್ಸಿ ೪೬ ರನ್ ಗಳಿಸಿದರು.
ಬೆಂಗಳೂರು ಪರ ಶ್ರೇಯಾಂಕ ಪಾಟೀಲ್ ೧ ವಿಕೆಟ್ ಹಾಗೂ ಸೋಫಿ ಡಿವೈನ್, ನಡೈನ್ ಡಿ ಕ್ಲರ್ಕ್ ತಲಾ ೨ ವಿಕೆಟ್ ಪಡೆದರು.
೧೯೫ ರನ್ಗಳ ಗೆಲುವಿನ ಗುರಿ ಬೆನ್ನತ್ತಿದ ಬೆಂಗಳೂರು ತಂಡ ನಿಗದಿತ ೨೦ ಓವರ್ಗಳಲ್ಲಿ ೯ ವಿಕೆಟ್ ಕಳೆದುಕೊಂಡು ೧೬೯ ರನ್ ಗಳಿಸಲಷ್ಟೇ ಶಕ್ತವಾಯಿತು.
ಬೆಂಗಳೂರು ಪರ ನಾಯಕಿ ಸ್ಮೃತಿ ಮಂದಾನ ೭೪ ರನ್, ಸುಬ್ಬಿನೇನಿ ಮೆಘನಾ ೩೬ ರನ್ ಗಳಿಸಿದರು.
ಡೆಲ್ಲಿ ಪರ ಜೆಸ್ ಜೊನಾಸನ್ ೩ ವಿಕೆಟ್, ಅರುಂಧತಿ ರೆಡ್ಡಿ, ಮರಿಝಾನ್ನೆ ಕಾಲರ್ ತಲಾ ೨ ವಿಕೆಟ್ ಹಾಗೂ ಶಿಖಾ ಪಾಂಡೆ ೧ ವಿಕೆಟ್ ಪಡೆದರು.
ಡೆಲ್ಲಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಮರಿಝಾನ್ನೆ ಕಾಪ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಇಂದು ನಡೆಯುವ ಪಂದ್ಯದಲ್ಲಿ ಯುಪಿ ವಾರಿಯರ್ಸ್ ಹಾಗೂ ಗುಜರಾತ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಲಿವೆ. ಪಂದ್ಯ ರಾತ್ರಿ ೭:೩೦ ಕ್ಕೆ ಆರಂಭವಾಗಲಿದೆ.
