ನವದೆಹಲಿ, 1 ಮಾರ್ಚ್ :ಆ್ಯಂಕರ್:
ಮಾರ್ಚ್ ತಿಂಗಳದ ಆರಂಭದಲ್ಲೇ ಗ್ರಾಹಕರಿಗೆ ತೈಲ ಕಂಪನಿಗಳು ದೊಡ್ಡ ಆಘಾತ ನೀಡಿವೆ. ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಮತ್ತೆ ಹೆಚ್ಚಿಸಲಾಗಿದ್ದು, ಇಂದಿನಿಂದ ಗ್ಯಾಸ್ ದರ ಮತ್ತಷ್ಟು ಹೆಚ್ಚಾಗಲಿದೆ.
ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 25 ರೂಪಾಯಿ ಏರಿಕೆಯಾಗಿದೆ. ಸತತ ಎರಡು ತಿಂಗಳಿಂದ 19 ಕೆಜಿಯ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ಏರಿಕೆ ಆಗುತ್ತಿದೆ. ಕಳೆದ ತಿಂಗಳ ಬಜೆಟ್ ದಿನದಂದು 14 ರೂಪಾಯಿ ಏರಿಸಲಾಗಿತ್ತು. ಇದೀಗ 25 ರೂಪಾಯಿ ಹೆಚ್ಚಳ ಮಾಡಲಾಗಿದ್ದು, ಹೊಸ ದರದ ಪ್ರಕಾರ ದೆಹಲಿಯಲ್ಲಿ 19 ಕೆಜಿಯ (ವಾಣಿಜ್ಯಕ್ಕೆ ಬಳಸುವ) ಒಂದು ಸಿಲಿಂಡರ್ ಬೆಲೆ 1795 ರೂಪಾಯಿ ಆಗಿದೆ. ಕೋಲ್ಕತ್ತಾದಲ್ಲಿ 1911, ಮುಂಬೈನಲ್ಲಿ 1749 ಹಾಗೂ ಚೆನ್ನೈನಲ್ಲಿ 1960.5 ರೂಪಾಯಿ ಆಗಿದೆ.
ಗೃಹ ಬಳಕೆಯ ಸಿಲಿಂಡರ್ನಲ್ಲಿ ಸ್ಥಿರತೆ..!
ಇನ್ನು ತೈಲ ಕಂಪನಿಗಳು ಗೃಹಬಳಕೆಯ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ದೆಹಲಿಯಲ್ಲಿ 14 ಕೆಜಿಯ ಎಲ್ಪಿಜಿ ಸಿಲಿಂಡರ್ ಬೆಲೆ 903, ಕೋಲ್ಕತ್ತಾದಲ್ಲಿ 929, ಮುಂಬೈನಲ್ಲಿ 902.50, ಚೆನ್ನೈನಲ್ಲಿ 918.50 ರೂಪಾಯಿ ಇದೆ.
