ಭಾರತೀಯ ಯುವಕರಿಗೆ ಕೆಲಸ ಕೊಡಿಸೋದಾಗಿ ಆಮಿಷವೊಡ್ಡಿ ರಷ್ಯಾಕ್ಕೆ ಕರೆದೊಯ್ದು ಯುದ್ಧಕ್ಕೆ ಬಳಸಿಕೊಳ್ಳಲಾಗ್ತಿದೆ. ಹೀಗೆ ಆಮಿಷವೊಡ್ಡಿದ ಜಾಲವನ್ನು ಸಿಬಿಐ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. 7 ಕಡೆ ದಾಳಿ ಮಾಡಿ ಮಾನವ ಕಳ್ಳಸಾಗಣೆ ಕುರಿತ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ಕೆಲವು ಏಜೆಂಟ್ಗಳು ಸಾಮಾಜಿಕ ಜಾಲತಾಣಗಳ ಮೂಲಕ ರಷ್ಯಾದಲ್ಲಿ ಉದ್ಯೋಗ ನೀಡುವುದಾಗಿ ಹೇಳಿ ಯುವಕರನ್ನು ರಷ್ಯಾಕ್ಕೆ ಕರೆದೊಯ್ದು ಅಲ್ಲಿನ ಸೇನೆಗಾಗಿ ಹೋರಾಡುವಂತೆ ಒತ್ತಾಯಿಸುತ್ತಿದ್ದರು. ಈ ಪ್ರಕರಣ ಬೆಳಕಿಗೆ ಬರ್ತಿದ್ದಂತೆ ತನಿಖೆ ಆರಂಭಿಸಿದ್ದ ಸಿಬಿಐ ಅಧಿಕಾರಿಗಳು ಏಜೆಂಟ್ಗಳ ಜಾಲವನ್ನು ಪತ್ತೆಹಚ್ಚಿದ್ದಾರೆ. ಅಲ್ಲದೇ ಈ ಜಾಲ ಬಳಸ್ತಿದ್ದ ಯೂಟ್ಯೂಬ್ ಬಂದ್ ಮಾಡಲಾಗಿದೆ. ಅವರ ಸಂಪರ್ಕಗಳನ್ನು ಕಡಿತಗೊಳಿಸಿದ್ದು, ಶೋಧ ಕಾರ್ಯ ಶುರುವಾಗಿದೆ.
ರಷ್ಯಾ ಪರವಾಗಿ ಯುದ್ಧದಲ್ಲಿ ಹೋರಾಡುತ್ತಿದ್ದ ಹೈದರಾಬಾದ್ ನ ಯುವಕ ಸಾವನ್ನಪ್ಪಿದ್ದಾನೆ ಎಂದು ಕಳೆದ ಎರಡು ದಿನಗಳ ಹಿಂದೆ ಸುದ್ದಿಯಾಗಿದೆ. ಕಳೆದ ಒಂದೂವರೆ ವರ್ಷಗಳಿಂದ ಉಕ್ರೇನ್ ಹಾಗೂ ರಷ್ಯಾ ನಡುವಿನ ನಡೆಯುತ್ತಲೇ ಇದೆ. ಈಗಾಗಲೇ ಲಕ್ಷಾಂತರ ಸೈನಿಕರನ್ನು ಬಲಿ ಪಡೆದಿರುವ ಈ ಯುದ್ಧವು ತಣ್ಣಗಾಗುತ್ತಿಲ್ಲ. ಹೀಗೆ ಉಕ್ರೇನ್ ಮೇಲೆ ಸಮರ ಸಾರಿರುವ ರಷ್ಯಾ ಸೈನಿಕರ ಕೊರತೆಯನ್ನ ಅನುಭವಿಸುತ್ತಿದ್ದು, ಭಾರತದಿಂದ ರಷ್ಯಾಕ್ಕೆ ತೆರಳಿರುವ ಯುವಕರನ್ನು ಬಲವಂತವಾಗಿ ಯುದ್ಧಕ್ಕೆ ಬಳಿಸಿಕೊಳ್ಳುತ್ತಿದೆ. ಉದ್ಯೋಗ ಅರಸಿ ರಷ್ಯಾಕ್ಕೆ ಬರುವ ಯುವಕರನ್ನೇ ಟಾರ್ಗೆಟ್ ಮಾಡುವ ರಷ್ಯಾದ ವ್ಯಾಗ್ನರ್ ಪಡೆ, ಅಸಾಯಕ ಯುವಕರಿಗೆ ಉದ್ಯೋಗ ಆಮಿಷ ತೋರಿಸಿ ಯುದ್ಧಕ್ಕೆ ಬಲವಂತವಾಗಿ ಬಳಸಿಕೊಳ್ಳುತ್ತಿದೆ.
