ರಾಷ್ಟ್ರಪತಿ ದ್ರೌಪದಿ ಮುರ್ಮು ಇದೇ ಸೋಮವಾರದಿಂದ ಮೂರು ದಿನ ಮಾರಿಷಸ್ ಗೆ ಭೇಟಿ ನೀಡಲಿದ್ದಾರೆ. ಮಂಗಳವಾರದಂದು ನಡೆಯಲಿರುವ ಅಲ್ಲಿಯ ರಾಷ್ಟ್ರೀಯ ದಿನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ರಾಷ್ಟ್ರಪತಿ ಪಾಲ್ಗೊಳ್ಳಲಿದ್ದಾರೆ. ಮಾರಿಷಸ್ ಅಧ್ಯಕ್ಷ ಪೃಥ್ವಿರಾಜ್ ಸಿಂಗ್ ರೂಪನ್, ಪ್ರಧಾನಿ ಪ್ರವಿಂದ್ ಕುಮಾರ್ ಜುಗನ್ನಾಥ್ ಹಾಗೂ ಇತರ ನಾಯಕರೊಂದಿಗೆ ಅವರು ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ. ಅಲ್ಲಿನ ಪ್ರಧಾನಿ ಜೊತೆಗೆ ಭಾರತದ ಸಹಕಾರವಿರುವ ಯೋಜನೆಗಳನ್ನು ಜಂಟಿಯಾಗಿ ಉದ್ಘಾಟಿಸಲಿದ್ದಾರೆ. ಇದು ಭಾರತ-ಮಾರಿಷಸ್ ಪಾಲುದಾರಿಕೆಯಡಿ ಭವ್ಯ ಪ್ರಗತಿಯ ಬಹುಮುಖ ಆಯಾಮವನ್ನು ಪ್ರದರ್ಶಿಸಲಿವೆ.
