ವಾಷಿಂಗ್ಟನ್, 27 ಫೆಬ್ರವರಿ :
ಆ್ಯಂಕರ್ : ಗಾಜಾದಲ್ಲಿ ನಡೆಯುತ್ತಿರುವ ಯುದ್ಧದ ವಿರುದ್ಧ ಪ್ರತಿಭಟನೆ ನಡೆಸಿದ ಸೈನಿಕನೊಬ್ಬ ಅಮೆರಿಕದ ವಾಷಿಂಗ್ಟನ್ ನಲ್ಲಿರುವ ಇಸ್ರೇಲಿ ರಾಯಭಾರ ಕಚೇರಿಯ ಹೊರಗೆ ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿರುವ ಘಟನೆ ನಡೆದಿದೆ.
‘ಫ್ರೀ ಪ್ಯಾಲೆಸ್ತೀನ್’ (ಪ್ಯಾಲೆಸ್ತೀನ್ ಸ್ವತಂತ್ರ್ಯಗೊಳಿಸಿ) ಎಂದು ಘೋಷಣೆ ಹಾಕುತ್ತ ಯುಎಸ್ ಏರ್ ಮ್ಯಾನ್ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ವಾಯುಪಡೆ ತಿಳಿಸಿದೆ.
ಆಘಾತಕಾರಿ ಘಟನೆಯು ಗಾಜಾದಲ್ಲಿ ಇಸ್ರೇಲ್ ನ ಕ್ರಮಗಳ ವಿರುದ್ಧ ಅಮೆರಿಕದದಾದ್ಯಂತ ಪ್ರತಿಭಟನೆಗಳಿಗೆ ಕಾರಣವಾಗಿದೆ. ಅಲ್ಲಿ ಅಮೆರಿಕ ಬೆಂಬಲದೊಂದಿಗೆ ಹಮಾಸ್ ಉಗ್ರಗಾಮಿಗಳು ಅಕ್ಟೋಬರ್ 7 ರಂದು ನಡೆಸಿದ ದಾಳಿಗೆ ಪ್ರತೀಕಾರದ ಯುದ್ಧವನ್ನು ನಡೆಸುತ್ತಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ದೃಶ್ಯಗಳಲ್ಲಿ, ಹೆಸರು ಹೇಳಲಿಚ್ಛಿಸದ ವ್ಯಕ್ತಿ ತನ್ನ ಮೇಲೆಯೇ ಬೆಂಕಿ ಹಚ್ಚಿಕೊಂಡಾಗ ‘ಫ್ರೀ ಪ್ಯಾಲೆಸ್ತೀನ್’ (ಪ್ಯಾಲೆಸ್ತೀನ್ ಸ್ವತಂತ್ರ್ಯಗೊಳಿಸಿ) ಎಂದು ಕೂಗಿದ್ದಾನೆ. ಈ ಘಟನೆ ವೇಳೆ ಯಾವುದೇ ಸಿಬ್ಬಂದಿ ಗಾಯಗೊಂಡಿಲ್ಲ ಎಂದು ಇಸ್ರೇಲಿ ರಾಯಭಾರ ಕಚೇರಿಯ ವಕ್ತಾರರು ತಿಳಿಸಿದ್ದಾರೆ.
