ನವದೆಹಲಿ, 18 ಫೆಬ್ರವರಿ : ಆ್ಯಂಕರ್:
ಪ್ರಧಾನಮಂತ್ರಿ ನರೇಂದ್ರ ಮೋದಿ ಈ ತಿಂಗಳ ೨೫ ಭಾನುವಾರದಂದು ಆಕಾಶವಾಣಿಯ ತಮ್ಮ ಮಾಸಿಕ ಕಾರ್ಯಕ್ರಮ ಮನ್ ಕಿ ಬಾತ್ ನಲ್ಲಿ ತಮ್ಮ ಚಿಂತನೆಗಳನ್ನು ದೇಶದ ಜನತೆಯೊಂದಿಗೆ ಹಂಚಿಕೊಳ್ಳಲಿದ್ದಾರೆ.
ಜನರು ಮನ್ ಕಿ ಬಾತ್ ಕಾರ್ಯಕ್ರಮಕ್ಕಾಗಿ ತಮ್ಮ ಚಿಂತನೆ, ಅಭಿಪ್ರಾಯಗಳನ್ನು ಮೈ ಗೌ ಪೋರ್ಟಲ್ ಮೂಲಕ ಅಥವಾ ಶುಲ್ಕ ರಹಿತ ದೂರವಾಣಿ ಸಂಖ್ಯೆ ೧೮೦೦ ೧೧ ೭೮೦೦ ಮೂಲಕ ಹಂಚಿಕೊಳ್ಳಬಹುದಾಗಿದೆ.
ಜನರು ಈ ತಿಂಗಳ ೨೩ರವರೆಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಬಹುದಾಗಿದೆ. ಮನ್ ಕಿ ಬಾತ್ ಕಾರ್ಯಕ್ರಮವು ಆಕಾಶವಾಣಿ ಮತ್ತು ದೂರದರ್ಶನದ ಸಂಪೂರ್ಣ ನೆಟ್ವರ್ಕ್ ನಲ್ಲಿ, ನಮ್ಮ ಜಾಲತಾಣದಲ್ಲಿ, ನ್ಯೂಸ್ ಆನ್ ಏರ್ ಮೊಬೈಲ್ ಆಪ್ ನಲ್ಲಿ ಪ್ರಸಾರವಾಗಲಿದೆ.
ಎಐಆರ್ ನ್ಯೂಸ್, ಡಿಡಿ ನ್ಯೂಸ್, ಪಿಎಂಒ ಮತ್ತು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಯೂಟ್ಯೂಬ್ ವಾಹಿನಿಗಳಲ್ಲೂ ನೇರ ಪ್ರಸಾರ ಲಭ್ಯ. ಹಿಂದಿ ಭಾಷೆಯ ಪ್ರಸಾರದ ನಂತರ ಪ್ರಾದೇಶಿಕ ಭಾಷೆಗಳ ಅವತರಣಿಕೆ ಪ್ರಸಾರವಾಗುತ್ತದೆ
