ಬೆಂಗಳೂರು, 18 ಫೆಬ್ರವರಿ : ಆ್ಯಂಕರ್:
ರಾತ್ರಿ 11 ಗಂಟೆ ದಾಟಿದ್ರೆ ಸಾಕು ಊಟ ಎಲ್ಲಿ ಸಿಗುತ್ತೆ ಅಂತಾ ಅಲುದಾಡ್ತಿದ್ದ ಶ್ರಮಿಕರು, ಕಾರ್ಮಿಕರು ಹಾಗೂ ರಾತ್ರಿ ಪಾಳಯದ ಕೆಲಸಗಾರರ ಜೊತೆಗೆ ಹೊಟೇಲ್ ಮಾಲೀಕರಿಗೆ ಸರ್ಕಾರ ಸಿಹಿ ಸುದ್ದಿ ಕೊಟ್ಟಿದೆ. ಬಜೆಟ್ ನಲ್ಲಿ ವ್ಯಾಪಾರ, ವಾಣಿಜ್ಯ ಅಭಿವೃದ್ಧಿ ಉದ್ದೇಶದಿಂದ ತಡರಾತ್ರಿ 1 ಗಂಟೆ ತನಕ ಹೊಟೇಲ್ ಓಪನ್ ಗೆ ಅವಕಾಶ ನೀಡಿರೋದಕ್ಕೆ ಹೊಟೇಲ್ ಮಾಲೀಕರು, ಗ್ರಾಹಕರು ಖುಷ್ ಆಗಿದ್ದಾರೆ. ನೈಟ್ ಲೈಫ್ ಎಂಜಾಯ್ ಮಾಡಬೇಕು ಅಂಡುಕೊಂಡವರಿಗೆ ಸರ್ಕಾರದ ಈ ನಿಯಮ ಗುಡ್ ನ್ಯೂಸ್ ಕೊಟ್ಟರೇ, ಅತ್ತ ರಾತ್ರಿ ಪಾಳಯದ ಕಾರ್ಮಿಕರಿಗೆ, ಹೊಟೇಲ್ ಮಾಲೀಕರಿಗೂ ಸಂತಸ ತಂದಿದೆ. ಆದರೆ ಈಗ 24 ಗಂಟೆ ವ್ಯಾಪಾರ ಅನುಮತಿಗೆ ಆಗ್ರಹ ಕೇಳಿ ಬಂದಿದೆ.
ರಾಜ್ಯದಲ್ಲಿ ತಡರಾತ್ರಿ 1 ಗಂಟೆ ತನಕ ವ್ಯಾಪಾರ, ವಹಿವಾಟಿಗೆ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿದೆ. ವ್ಯಾಪಾರ, ವಾಣಿಜ್ಯ ಅಭಿವೃದ್ಧಿಗೆ ಸರ್ಕಾರ ತೆಗೆದುಕೊಂಡಿರೋ ಪ್ಲಾನ್ ಗೆ ಸಿಲಿಕಾನ್ ಸಿಟಿ ಮಂದಿ ಫುಲ್ ಖುಷ್ ಆಗಿದ್ದಾರೆ. ಮೊದಲೆಲ್ಲ ರಾತ್ರಿ 10 ,11 ಗಂಟೆಗೆ ಹೊಟೇಲ್ ಬಂದ್ ಆಗ್ತಿದ್ದರಿಂದ ಪರದಾಡ್ತಿದ್ದ ಜನರು, ಇದೀಗ 1 ಗಂಟೆ ತನಕ ಅವಕಾಶ ಕೊಟ್ಟಿರೋದಕ್ಕೆ ಸಂತಸ ವ್ಯಕ್ತಪಡಿಸ್ತಿದ್ದಾರೆ.
