ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಚಾರದ ಸಮಯದಲ್ಲಿ ಬಿಗಿ ಭದ್ರತೆಯಿದ್ದರೂ ಗನ್ ಹಿಡಿದ ಯುವಕನಿಂದ ದಾಳಿ ನಡೆದಿದ್ದು, ಭದ್ರತೆಯ ಲೋಪದ ವಿಷಯವನ್ನು ಬೆಳಕಿಗೆ ತಂದಿದೆ. ಸೀಕ್ರೇಟ್ ಸರ್ವೀಸ್ ಭದ್ರತೆಯಲ್ಲಿ ಲೋಪವಾಗಿಲ್ಲವೆಂದು ಹೆಮ್ಮೆಪಡುವ ಅಮೆರಿಕದ ಭದ್ರತಾ ವ್ಯವಸ್ಥೆಯ ಲೋಪದ ಕುರಿತು ಪ್ರಶ್ನೆಗಳು ಉದ್ಭವಿಸಿವೆ.
BulletsIn
- ಟ್ರಂಪ್ ಪ್ರಚಾರದ ಸಮಯದಲ್ಲಿ ಗನ್ ಹಿಡಿದ 20 ವರ್ಷದ ಯುವಕ ಥಾಮಸ್ ಕ್ರುಕ್ಸ್ ದಾಳಿ.
- ಭಾರಿ ಬಿಗಿ ಭದ್ರತೆಯಿದ್ದರೂ ಯುವಕ ಸ್ಥಳಕ್ಕೆ ಹೇಗೆ ಬಂದ ಎಂಬುದರ ಕುರಿತು ಅಸ್ಪಷ್ಟತೆ.
- ಭದ್ರತಾ ಪಡೆಗೆ ಹಂತಕನ ಬಗ್ಗೆ ಮಾಹಿತಿ ನೀಡಿದರೂ ಯಾವುದೇ ಕ್ರಮ ಕೈಗೊಳ್ಳದ ಬಗ್ಗೆ ಪ್ರತ್ಯಕ್ಷದರ್ಶಿಗಳ ಆಕ್ಷೇಪ.
- ಥಾಮಸ್ ಕ್ರುಕ್ಸ್ ಮನೆಯಿಂದ ಮನೆಗೆ ಜಿಗಿದು ಉತ್ಪಾದನಾ ಘಟಕದ ಛಾವಣಿಯ ಮೇಲೆ ಕುಳಿತು ಶೂಟ್ ಮಾಡಿದ್ದ.
- ಶೂಟ್ ಮಾಡಿದ ಬಳಿಕ ಸ್ನೈಪರ್ಸ್ ಆತನ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ.
- ಥಾಮಸ್ ಕ್ರುಕ್ಸ್ ಬೂದು ಬಣ್ಣದ ಜಾಕೆಟ್ ಧರಿಸಿ ಗನ್ ಹಿಡಿದು ಮಲಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್.
- ಅಮೆರಿಕದ ಸೀಕ್ರೇಟ್ ಸರ್ವೀಸ್ ಭದ್ರತೆಯಲ್ಲಿ ಲೋಪದ ಕುರಿತು ಪ್ರಶ್ನೆಗಳು.
- ಟ್ರಂಪ್ ಭಾಷಣ ಮಾಡುತ್ತಿದ್ದ ಸ್ಥಳದಿಂದ 200-250 ಅಡಿ ದೂರದಲ್ಲಿ ಶೂಟ್ ಮಾಡಿದ ಯುವಕ.
- ವಿಡಿಯೋದಲ್ಲಿ ಯುವಕನ ಶೂಟಿಂಗ್ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್.
