ಮುಂಬೈ, 6 ಫೆಬ್ರವರಿ :
ಆ್ಯಂಕರ್ : ಈ ವಾರ ರಜನಿಕಾಂತ್ ನಟನೆಯ ಲಾಲ್ ಸಲಾಂ ಸಿನಿಮಾ ಬಿಡುಗಡೆ ಆಗುತ್ತಿದೆ. ಅದಕ್ಕೂ ಮುನ್ನ ಚಿತ್ರದ ಟ್ರೈಲರ್ ಬಿಡುಗಡೆ ಆಗಿದ್ದು, ರಜನಿ ಸಖತ್ ಸ್ಟೈಲೀಶ್ ಆಗಿ ಕಂಡಿದ್ದಾರೆ. ಖಡಕ್ ಡೈಲಾಗ್ ಹೊಡೆದಿದ್ದಾರೆ. ರಜನಿ ಅಭಿಮಾನಿಗಳಿಗೆ ಏನೆಲ್ಲ ಬೇಕೊ ಎಲ್ಲವನ್ನೂ ಕೊಟ್ಟಿದ್ದಾರೆ ನಿರ್ದೇಶಕಿ ಐಶ್ವರ್ಯ ರಜನಿಕಾಂತ್.
‘ಜೈಲರ್’ ಅಭೂತಪೂರ್ವ ಯಶಸ್ಸಿನ ಬಳಿಕ ಸೂಪರ್ ಸ್ಟಾರ್ ರಜನಿಕಾಂತ್ ನಟಿಸಿರುವ ಬಹುನಿರೀಕ್ಷಿತ ಸಿನಿಮಾ ‘ಲಾಲ್ ಸಲಾಂ’ ರಿಲೀಸ್ ಆಗುತ್ತಿರುವುದಕ್ಕೆ ಸಹಜವಾಗಿಯೇ ನಿರೀಕ್ಷೆ ಹೆಚ್ಚಿದೆ. ಈ ಚಿತ್ರವನ್ನು ರಜನಿ ಪುತ್ರಿ ಐಶ್ವರ್ಯ ರಜನಿಕಾಂತ್ ನಿರ್ದೇಶಿಸುತ್ತಿದ್ದಾರೆ. ಕಳೆದ ಸಂಕ್ರಾಂತಿ ಹಬ್ಬದಂದು ಚಿತ್ರ ತೆರೆ ತರುವುದಾಗಿ ಈ ಹಿಂದೆ ಚಿತ್ರತಂಡ ಘೋಷಣೆ ಮಾಡಿತ್ತು. ನಂತರ ಮುಂದೂಡಿಲಾಗಿತ್ತು.
