ಹೈದರಾಬಾದ್, 24 ಫೆಬ್ರವರಿ :
ಆ್ಯಂಕರ್ :
ಟಾಲಿವುಡ್ ನ ಮೆಗಾಸ್ಟಾರ್ ಮನೆ ಮಗಳು ನಿಹಾರಿಕಾ ಸದಾ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ವೈಯಕ್ತಿಕ ವಿಚಾರಗಳಿಂದ ಹೆಚ್ಚೆಚ್ಚು ಸುದ್ದಿಯಲ್ಲಿದ್ದ ನಿಹಾರಿಕಾ ಇದೀಗ ರಾಜಕೀಯಕ್ಕೆ ಪ್ರವೇಶಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಸಿನಿಮಾ ಬಿಟ್ಟು ರಾಜಕೀಯದತ್ತ ನಟಿ ಮುಖ ಮಾಡ್ತಾರಾ? ಇಲ್ಲಿದೆ ಮಾಹಿತಿ.
ವಿಚ್ಛೇದನ (ಡಿವೋರ್ಸ್) ಆದ್ಮೇಲೆ ಮತ್ತೆ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿರೋ ನಟಿ ಸಿನಿಮಾ ಬಿಟ್ಟು, ರಾಜಕೀಯಕ್ಕೆ ಎಂಟ್ರಿ ಕೊಡ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಸದ್ಯದಲ್ಲೇ ನಟಿ ಎಂಪಿ ಚುನಾವಣೆಯಲ್ಲಿ ಭಾಗವಹಿಸಲಿದ್ದಾರೆ ಎಂಬ ಸುದ್ದಿಗೆ ನಿಹಾರಿಕಾ ಆಪ್ತರು ಸ್ಪಷ್ಟನೆ ನೀಡಿದ್ದಾರೆ. ರಾಜಕೀಯಕ್ಕೆ ಪ್ರವೇಶ ಕೊಡ್ತಾರೆ ಎಂಬುದು ಸುಳ್ಳು ಸುದ್ದಿ ಎಂದು ಮಾಹಿತಿ ನೀಡಿದ್ದಾರೆ. ಪವನ್ ಕಲ್ಯಾಣ್ ಪರವಾಗಿ ಪ್ರಚಾರ ಕಾರ್ಯದಲ್ಲಿ ಭಾಗಿಯಾಗ್ತಾರೆ. ಆದರೆ ರಾಜಕೀಯಕ್ಕೆ ನಟಿ ಬರುವುದಿಲ್ಲ ಎನ್ನಲಾಗಿದೆ.
