ಗುಲ್ಮಾರ್ಗ್, 24 ಫೆಬ್ರವರಿ :
ಆ್ಯಂಕರ್ :
ಜಮ್ಮು ಮತ್ತು ಕಾಶ್ಮೀರದ ಗುಲ್ಮಾರ್ಗ್ ನಲ್ಲಿ ನಡೆಯುತ್ತಿರುವ ಖೇಲೋ ಇಂಡಿಯಾ ಚಳಿಗಾಲದ ಆಟಗಳಲ್ಲಿ ಕರ್ನಾಟಕ ಎಂಟು ಚಿನ್ನ ಮತ್ತು ಎರಡು ಬೆಳ್ಳಿ ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ ಮತ್ತು ಮಹಾರಾಷ್ಟ್ರ ೬ ಚಿನ್ನ, ೮ ಬೆಳ್ಳಿ ಮತ್ತು ೭ ಕಂಚಿನ ಪದಕಗಳೊಂದಿಗೆ ನಂತರದ ಸ್ಥಾನದಲ್ಲಿದೆ. ೪ ಚಿನ್ನ, ೩ ಬೆಳ್ಳಿ ಮತ್ತು ೩ ಕಂಚಿನ ಪದಕಗಳೊಂದಿಗೆ ಭಾರತೀಯ ಸೇನೆ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ನಾರ್ಡಿಕ್ ಸ್ಕೀಯಿಂಗ್ ಸ್ಪರ್ಧೆಯಲ್ಲಿ, ಪುರುಷರ ೧೫ ಕಿಮೀ ಓಟದ ವಿಭಾಗದಲ್ಲಿ ಭಾರತೀಯ ಸೇನೆಯ ಪದ್ಮಾ ನಾಮ್ಗಿಯಾಲ್ ಚಿನ್ನದ ಪದಕವನ್ನು ಪಡೆದರು, ಮಹಿಳೆಯರ ವಿಭಾಗದಲ್ಲಿ ಕರ್ನಾಟಕದ ಭವಾನಿ ತೆಕ್ಕಡ ಚಿನ್ನದ ಪದಕ ಪಡೆದರೆ, ಐಟಿಬಿಪಿಯ ಸಪ್ನಾ ಬೆಳ್ಳಿ ಹಾಗೂ ಪ್ರಿನ್ಸ್ ಕುಮಾರಿ ಕಂಚಿನ ಪದಕ ಪಡೆದರು. ಪುರುಷರ ವಿಭಾಗದ ಸ್ಕೀ ಪರ್ವತಾರೋಹಣ ರಿಲೇಯಲ್ಲಿ, ಭಾರತೀಯ ಸೇನೆಯು ಚಿನ್ನ, ಉತ್ತರಾಖಂಡ ಬೆಳ್ಳಿ ಮತ್ತು ಜಮ್ಮು ಮತ್ತು ಕಾಶ್ಮೀರ ಕಂಚು ಪಡೆದುಕೊಂಡಿದೆ. ಮಹಿಳೆಯರ ವಿಭಾಗದ ಸ್ಪರ್ಧೆಯಲ್ಲಿ ಹಿಮಾಚಲ ಪ್ರದೇಶ ಚಿನ್ನ ಗೆದ್ದರೆ, ಜಮ್ಮು ಮತ್ತು ಕಾಶ್ಮೀರ ಬೆಳ್ಳಿ ಪದಕ ಗೆದ್ದುಕೊಂಡಿದೆ.:
