ಬೆಂಗಳೂರು, 19 ಡಿಸೆಂಬರ್(ಹಿ.ಸ):
ಆ್ಯಂಕರ್ :
ಕನ್ನಡ ಚಿತ್ರರಂಗದ ಅದ್ಭುತ ನಟ ವಿನಯ್ ಕುಮಾರ್ ಉರ್ಫ್ ದುನಿಯಾ ವಿಜಯ್ ಹಿರಿ ಮಗಳನ್ನು ಕನ್ನಡ ಚಿತ್ರರಂಗಕ್ಕೆ ಕರೆತರಲು ಸಜ್ಜಾಗಿದ್ದಾರೆ. ಕಳೆದ ವಾರ ಫೋಟೋಶೂಟ್ ಮೂಲಕ ಸಿಹಿ ಸುದ್ದಿ ರಿವೀಲ್ ಮಾಡಿದ್ದರು. ‘ತಂದೆಯಾಗಿ ನನ್ನ ಮಕ್ಕಳ ಬಗ್ಗೆ ನನಗೆ ತುಂಬಾ ಕನಸುಗಳು ಇದೆ ಅದರಲ್ಲಿ ಒಂದು ಕನಸು ನನಸಾಗುತ್ತಿದೆ. ಶೀಘ್ರದಲ್ಲಿ ಮೊನಿಕಾ ಮುಂದಿನ ಸಿನಿಮಾ ರಂಗಕ್ಕೆ ಕಾಲಿಡುತ್ತಿದ್ದಾಳೆ’ ಎಂದು ದುನಿಯಾ ವಿಜಯ್ ಖುಷಿ ವಿಚಾರ ಹಂಚಿಕೊಂಡಿದ್ದಾರೆ.
‘ಮೊನಿಕಾ ನಟಿಸುತ್ತಿರುವುದು ಒಂದು ಫ್ಯಾಮಿಲಿ ಡ್ರಾಮಾ ಸಿನಿಮಾದಲ್ಲಿ. ಮೊನಿಕಾ ಆನ್ ಸ್ಕ್ರೀನ್ ತಂದೆಯ ಪಾತ್ರದಲ್ಲಿ ನಾನು ಕಾಣಿಸಿಕೊಳ್ಳುತ್ತಿರುವೆ’ ಎಂದು ಹೇಳಿದ್ದಾರೆ. ಗುರು ಶಿಷ್ಯರು ಚಿತ್ರ ನಿರ್ದೇಶನ ಮಾಡಿರುವ ಜಗದೀಶ್ ಕೆ ಹಂಪಿ ಜೊತೆ ವಿಜಯ್ ಕೈ ಜೋಡಿಸಿದ್ದಾರೆ. ‘ಮಗಳು ಮೋನಿಕಾ ಥಿಯೇಟರ್ನಲ್ಲಿ ಇದ್ದವಳು ಹೀಗಾಗಿ ಸಿನಿಮಾ ಕೊಂಚ ಸುಲಭವಾಗಲಿದೆ. ಸೆಟ್ ವಿಚಾರದ ಬಗ್ಗೆ ಹೇಳಬೇಕು ಅಂದ್ರೆ ನಾನು ತುಂಬಾ ಶಿಸ್ತು ಫಾಲೋ ಮಾಡುವ ವ್ಯಕ್ತಿ ಅದನ್ನೇ ಮಕ್ಕಳಿಗೂ ಹೇಳಿಕೊಟ್ಟಿರುವೆ. ಮಗಳ ಕೋ-ಆಕ್ಟರ್ ನಾನು ಆಗಿರುವ ಕಾರಣ ಉತ್ತಮ ನಿರೀಕ್ಷೆ ಮಾಡುತ್ತೀನಿ’ ಎಂದಿದ್ದಾರೆ ವಿಜಯ್.
ಹಿಂದೂಸ್ತಾನ್ ಸಮಾಚಾರ್
