ನವದೆಹಲಿ, 20 ಡಿಸೆಂಬರ್(ಹಿ.ಸ):
ಆ್ಯಂಕರ್ :
ಕೊವಿಡ್ ಕಾಣಿಸಿಕೊಂಡ ಬಳಿಕ ಒಟಿಟಿ ಪ್ಲಾಟ್ ಫಾರ್ಮ್ಗಳ ಬಳಕೆ ಹೆಚ್ಚಿದೆ. ಅಮೇಜಾನ್ ಪ್ರೈಮ್, ನೆಟ್ಫ್ಲಿಕ್ಸ್ ಸೇರಿದಂತೆ ಅನೇಕ ಒಟಿಟಿ ಪ್ಲಾಟ್ ಫಾರ್ಮ್ಗಳಿಗೆ ಬೇಡಿಕೆ ಹೆಚ್ಚಿದೆ. ಈಗ ನೆಟ್ಫ್ಲಿಕ್ಸ್ ನಿರ್ಧಾರದಿಂದ ಭಾರತದ ಸಿನಿಪ್ರಿಯರಿಗೆ ಬೇಸರ ಆಗಿದೆ. ‘ಇದು ನಾವು ತೆಗೆದುಕೊಂಡ ನಿರ್ಧಾರ ಅಲ್ಲ. ಇದರ ಹಿಂದೆ ಸೆನ್ಸಾರ್ ಮಂಡಳಿಯ ಸೂಚನೆ ಇದೆ’ ಎಂದು ಸ್ಪಷ್ಟಪಡಿಸಿದೆ. ಅಷ್ಟಕ್ಕೂ ಬದಲಾದ ನಿರ್ಧಾರ ಏನು? ಸಿನಿಪ್ರಿಯರು ಬೇಸರಗೊಂಡಿದ್ದು ಏಕೆ ಎಂಬಿತ್ಯಾದಿ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.ಸೆನ್ಸಾರ್ ಆದ ಬಳಿಕವೇ ಥಿಯೇಟರ್ನಲ್ಲಿ ಸಿನಿಮಾ ಪ್ರದರ್ಶನ ಕಾಣಲಿದೆ. ಸಿನಿಮಾದಲ್ಲಿ ಯಾವುದಾದರೂ ಹೆಚ್ಚುವರಿ ದೃಶ್ಯ ಸೇರ್ಪಡೆ ಮಾಡಿದರೆ ಮತ್ತೆ ಅದನ್ನು ಸೆನ್ಸಾರ್ ಮಂಡಳಿಯ ಎದುರು ಇಟ್ಟ ಬಳಿಕವೇ ಅದನ್ನು ಪ್ರದರ್ಶಿಸಲು ಅವಕಾಶ ಇದೆ. ಆದರೆ, ಒಟಿಟಿ ಪ್ಲಾಟ್ಫಾರ್ಮ್ಗಳಿಗೆ ಈ ರೀತಿಯ ನಿರ್ಬಂಧ ಇಲ್ಲ. ಅಲ್ಲಿ ಪ್ರಸಾರ ಆಗುವ ಸಿನಿಮಾಗಳಿಗೆ ಯಾವುದೇ ಸೆನ್ಸಾರ್ ಪ್ರಕ್ರಿಯೆಯ ಅಗತ್ಯವಿಲ್ಲ. ಹೀಗಾಗಿ, ಕಟ್ ಮಾಡಲ್ಪಟ್ಟ ದೃಶ್ಯಗಳನ್ನು ಸೇರಿಸಿ ಒಟಿಟಿಯಲ್ಲಿ ಸಿನಿಮಾ ಪ್ರಸಾರ ಮಾಡಲಾಗುತ್ತಿತ್ತು. ಈ ರೀತಿ ಮಾಡದಂತೆ ನೆಟ್ಫ್ಲಿಕ್ಸ್ಗೆ ಸೆನ್ಸಾರ್ ಮಂಡಳಿ ಸೂಚನೆ ನೀಡಿದೆ.
ಹಿಂದೂಸ್ತಾನ್ ಸಮಾಚಾರ್
