ನವದೆಹಲಿ, 20 ಡಿಸೆಂಬರ್(ಹಿ.ಸ):
ಆ್ಯಂಕರ್ :
೯ನೇ ಆವೃತ್ತಿಯ ವಾಣಿಜ್ಯ ಕಲ್ಲಿದ್ದಲು ಗಣಿ ಹರಾಜು ಪ್ರಕ್ರಿಯೆ ಇಂದು ನಡೆಯಲಿದೆ. ಮುಂದಿನ ಸುತ್ತಿನ ಹರಾಜಿನಲ್ಲಿ ಒಟ್ಟು ೨೬ ಕಲ್ಲಿದ್ದಲು ಗಣಿಗಳು ಪ್ರಕ್ರಿಯೆಯಲ್ಲಿ ಭಾಗವಹಿಸಲಿವೆ ಎಂದು ಸಚಿವಾಲಯ ತಿಳಿಸಿದೆ. ಸ್ಥಿರ ಅಭಿವೃದ್ಧಿಗೆ ಗಣಿ ವಲಯದ ಅನೇಕ ಖಾಸಗಿ ಪಾಲುದಾರರ ಭಾಗವಹಿಸುವಿಕೆ ವೃದ್ಧಿಸಲು, ಸ್ಪರ್ಧಾತ್ಮಕತೆ ಬೆಳೆಸಲು ದಕ್ಷತೆ, ಅನ್ವೇಷಣೆಯ ಕೊಡುಗೆ ನೀಡಲು ಈ ಹರಾಜು ಪ್ರಕ್ರಿಯೆಯು ಅವಕಾಶ ಮಾಡಿಕೊಡಲಿದೆ. ಕಲ್ಲಿದ್ದಲು ಬಳಕೆ ಅಥವಾ ಮಾರಾಟದ ಮೇಲೆ ಯಾವುದೇ ತಾಂತ್ರಿಕ ಅಥವಾ ಹಣಕಾಸು ನಿರ್ಬಂಧಗಳಿಲ್ಲದೇ ಹರಾಜಿನಲ್ಲಿ ಭಾಗವಹಿಸುವಂತೆ ಮಾಡಲು ಅರ್ಹತಾ ಮಾನದಂಡ ತೆಗೆದುಹಾಕಲಾಗಿದೆ ಎಂದು ಸಚಿವಾಲಯ ತಿಳಿಸಿದೆ. ಕಲ್ಲಿದ್ದಲು ಮತ್ತು ಲಿಗ್ನೈಟ್ ಗಣಿಗಳ ಕಾರ್ಯಕ್ರಮತೆಯನ್ನು ಗುರುತಿಸಲು ಸ್ಟಾರ್ ರೇಟಿಂಗ್ ಅವಾರ್ಡ್ಸ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಗಣಿ ಕಾರ್ಯಾಚರಣೆ, ಪರಿಸರ ಅಂಶಗಳು, ತಂತ್ರಜ್ಞಾನ ಅಳವಡಿಕೆ, ಉತ್ತಮ ಗಣಿ ಚಟವಟಿಕೆಗಳು, ಸುರಕ್ಷತೆ ಮತ್ತು ಭದ್ರತೆಯಂತಹ ಕೆಲವು ಸಮಗ್ರ ಅಂಶಗಳನ್ನು ಈ ಪ್ರಶಸ್ತಿಗೆ ಮಾನದಂಡವಾಗಿ ಪರಿಗಣಿಸಲಾಗುತ್ತದೆ ಎಂದು ಸಚಿವಾಲಯ ಹೇಳಿದೆ. ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಕೇಂದ್ರ ಗಣಿ ಸಚಿವ ಪ್ರಹ್ಲಾದ್ ಜೋಷಿ ಹಾಗೂ ಗಣಿಖಾತೆ ರಾಜ್ಯ ಸಚಿವ ರಾವ್ಸಾಹೇಬ್ ಪಾಟೀಲ್ ದನ್ವೆ ಅವರೂ ಕೂಡ ಭಾಗವಹಿಸಲಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
