• English
  • Hindi
  • Punjabi
  • Marathi
  • German
  • Gujarati
  • Urdu
  • Telugu
  • Bengali
  • Kannada
  • Odia
  • Assamese
  • Nepali
  • Spanish
  • French
  • Japanese
  • Arabic
  • Home
  • Noida
  • Breaking
  • National
    • New India
  • International
  • Entertainment
  • Crime
  • Business
  • Sports
Notification
  • Home
  • Noida
  • Breaking
  • National
    • New India
  • International
  • Entertainment
  • Crime
  • Business
  • Sports
  • Home
  • Noida
  • Breaking
  • National
    • New India
  • International
  • Entertainment
  • Crime
  • Business
  • Sports
  • Noida
  • Breaking
  • National
  • International
  • Entertainment
  • Crime
  • Business
  • Sports
CliQ INDIA Sites > CliQ INDIA Kannada > Entertainment > ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಗಮನ ಸೆಳೆದ ‘ಚಂಬಲ್’ ನಾನ್-ಫೀಚರ್ ಚಿತ್ರ
Entertainment

ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಗಮನ ಸೆಳೆದ ‘ಚಂಬಲ್’ ನಾನ್-ಫೀಚರ್ ಚಿತ್ರ

CliQ INDIA
Last updated: November 24, 2025 12:40 am
CliQ INDIA
Share
1 Min Read
SHARE

ಪಣಜಿ, 23 ನವೆಂಬರ್ (ಹಿ.ಸ.):

ಆ್ಯಂಕರ್:ಮಧ್ಯಪ್ರದೇಶದ ಮೊರೆನಾ, ಭಿಂದ್, ಶಿಯೋಪುರ್, ಗ್ವಾಲಿಯರ್ ಮತ್ತು ದಾಟಿಯಾ ಜಿಲ್ಲೆಗಳ ಸಾಮಾಜಿಕ-ಸಾಂಸ್ಕೃತಿಕ ವಾಸ್ತವಿಕತೆಯನ್ನು ಬಿಂಬಿಸುವ ಯುವ ನಿರ್ದೇಶಕ ಅನ್ಹಾದ್ ಮಿಶ್ರಾ ಅವರ ‘ಚಂಬಲ್’ ನಾನ್-ಫೀಚರ್ ಚಿತ್ರವು ಇಂದು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಭಾರತೀಯ ಪನೋರಮಾ ವಿಭಾಗದಲ್ಲಿ ಪ್ರದರ್ಶನಗೊಂಡು ವಿಶಿಷ್ಟ ಗಮನ ಸೆಳೆದಿದೆ.

33 ನಿಮಿಷಗಳ ಅವಧಿಯ ಈ ಚಿತ್ರವು ಬಂದೂಕುಗಳ ನೆರಳಿನಲ್ಲಿ ಬದುಕುತ್ತಿರುವ ಚಂಬಲ್ ಪ್ರದೇಶದ ಸಂಪ್ರದಾಯ, ಗೌರವ, ಹಿಂಸೆ ಮತ್ತು ಸಾಮಾಜಿಕ ಮನೋವೃತ್ತಿಗಳ ನಡುವಿನ ಸಂಕೀರ್ಣ ಸಂಬಂಧವನ್ನು ಅನಾವರಣಗೊಳಿಸುತ್ತದೆ. ಡಕಾಯಿ ಸಂಸ್ಕೃತಿಗೆ ಹೆಸರುವಾಸಿಯಾಗಿದ್ದ ಈ ಭೌಗೋಳಿಕತೆ ಇಂದಿಗೂ ಶಸ್ತ್ರಾಸ್ತ್ರಗಳನ್ನು ಪ್ರತಿಷ್ಠೆ, ಶಕ್ತಿ ಮತ್ತು ಪ್ರಭಾವದ ಸಂಕೇತವಾಗಿ ಕಂಡುಕೊಳ್ಳುತ್ತದೆ.

ಚಿತ್ರದ ನಿರ್ದೇಶಕ ಅನ್ಹದ್ ಮಿಶ್ರಾ ಅವರ ಪ್ರಕಾರ, “ಚಂಬಲ್ ಕೇವಲ ಒಂದು ಚಲನಚಿತ್ರವಲ್ಲ; ಇದು ಇತಿಹಾಸ, ಭಯ, ಹೆಮ್ಮೆ ಮತ್ತು ಸಾಮಾಜಿಕ ನೆನಪುಗಳ ಆತ್ಮಚರಿತ್ರೆ”. ಆಯುಧ ಪೂಜೆ, ಮದುವೆ ಸಂಪ್ರದಾಯಗಳು, ಸ್ಥಳೀಯ ರಾಜಕೀಯ—ಎಲ್ಲವೂ ಬಂದೂಕಿನ ಪ್ರಭಾವವು ದೈನಂದಿನ ಜೀವನದಲ್ಲಿ ಶಾಶ್ವತವಾಗಿ ಇರುವುದು ಚಿತ್ರವು ಸೂಕ್ಷ್ಮವಾಗಿ ಬಿಂಬಿಸುತ್ತದೆ.

ಕ್ಯಾಮೆರಾ ಚಂಬಲ್ ಕಣಿವೆಯ ಒರಟಾದ ಭೂದೃಶ್ಯವನ್ನು—ಪೊದೆಗಳು, ಡಾಂಬರು ಹಾಕದ ದಾರಿಗಳು, ಧೂಳಿನ ವಾತಾವರಣ ಮತ್ತು ಶಸ್ತ್ರಾಸ್ತ್ರಗಳ ಹೊಳಪಿನ ಮಧ್ಯೆ ಬದುಕುತ್ತಿರುವ ಜನರ ವಾಸ್ತವವನ್ನು—ವೈಭವೀಕರಿಸದೆ, ಆರೋಪಿಸದೆ, ಕೇವಲ ಸಾಕ್ಷಿಯಂತೆ ದಾಖಲಿಸುತ್ತದೆ. ಸ್ಥಳೀಯರ ಧ್ವನಿಗಳು, ಅವರ ನಂಬಿಕೆಗಳು ಮತ್ತು ತಲೆಮಾರುಗಳಿಂದ ಬಂದಿರುವ ‘ಗೌರವ’ ಪರಿಕಲ್ಪನೆಗಳು ಭಾರತದ ಸಮಾಜದಲ್ಲಿನ ಗುರುತು, ಅಪರಾಧ ಮತ್ತು ಸಂಪ್ರದಾಯದ ಕುರಿತ ಗಂಭೀರ ಪ್ರಶ್ನೆಗಳನ್ನು ಎತ್ತುತ್ತವೆ.

ಸಂಘಟಿತ ಅಪರಾಧ, ಚುನಾವಣಾ ಪ್ರಚಾರಗಳಲ್ಲಿ ಶಸ್ತ್ರಾಸ್ತ್ರಗಳ ಪ್ರದರ್ಶನ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿನ ಬಂದೂಕು ಸಂಪ್ರದಾಯಕ್ಕೆ ಹೊಸ ರೂಪ ಸಿಗುತ್ತಿರುವ ಸಂದರ್ಭದಲ್ಲಿ ‘ಚಂಬಲ್’ ಅತ್ಯಂತ ಪ್ರಸ್ತುತವಾದ ಚಿತ್ರವಾಗಿದೆ ಎಂದು ನಿರ್ದೇಶಕ ಹೇಳುತ್ತಾರೆ.

ಸಂಯೋಜಕ ನಿನಾದ್ ಪರಬ್ ಅವರ ಸಂಗೀತ, ಸಮತೋಲನಗೊಂಡ ಸಂಕಲನ ಹಾಗೂ ನಿರೂಪಣೆಯ ಪ್ರಾಮಾಣಿಕತೆಯೊಂದಿಗೆ ಈ ಚಿತ್ರವು ಚಿಂತನಶೀಲ ಅನುಭವವನ್ನು ನೀಡುತ್ತದೆ.

‘ಚಂಬಲ್’ ಬಂದೂಕುಗಳ ಗದ್ದಲದ ಹಿಂದೆ ಅಡಗಿರುವ ಸಾಮಾಜಿಕ ಪ್ರಶ್ನೆಗಳನ್ನು ಕಲಾತ್ಮಕವಾಗಿ ತೆರೆದಿಡುವ ಮೇರುಕೃತಿ ಎಂದು ವಿಮರ್ಶಕರು ಶ್ಲಾಘಿಸಿದ್ದಾರೆ.

—————

ಹಿಂದೂಸ್ತಾನ್ ಸಮಾಚಾರ್ / Rakesh Mahadevappa

You Might Also Like

ಗಶ್ಮೀರ್ ಮಹಾಜನಿ ಅಭಿನಯದ ‘ಗುಣ’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ
ಆರೋಗ್ಯದಲ್ಲಿ ಚೇತರಿಕೆ ಕಂಡ ನಟ ಶಿವರಾಜ್ ಕುಮಾರ್,ಆಸ್ಪತ್ರೆಯಿಂದ ಇಂದು ಬಿಡುಗಡೆ ಸಾಧ್ಯತೆ
ಮಗಳ ಮೊದಲ ಚಿತ್ರದಲ್ಲೂ ನಾನೇ ತಂದೆ- ದುನಿಯಾ ವಿಜಯ್
ಸಚಿವ ಜಮೀರ್‌ ಪುತ್ರ ಅಭಿನಯದ ಕಲ್ಟ್ ಚಲನ ಚಿತ್ರ  ಚಿತ್ರೀಕರಣಕ್ಕೆ ತಡೆ | BulletsIn
ಅರಿಜಿತ್ ಸಿಂಗ್ ನಿವೃತ್ತಿ ಘೋಷಣೆಯ ನಂತರ ಅಮೀರ್ ಖಾನ್ ಸಹಯೋಗದ ಕುರಿತು ಮೌನ ಮುರಿದರು

Sign Up For Daily Newsletter

Be keep up! Get the latest breaking news delivered straight to your inbox.
[mc4wp_form]
By signing up, you agree to our Terms of Use and acknowledge the data practices in our Privacy Policy. You may unsubscribe at any time.
Share This Article
Facebook Whatsapp Whatsapp Telegram Copy Link Print
Share
What do you think?
Love0
Sad0
Happy0
Angry0
Wink0
Previous Article ಕೈ ಮಗ್ಗ ಮತ್ತು ಜವಳಿ ಇಲಾಖೆಯಿಂದ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ
Next Article ಬಿಎಂಎಸ್ ಹಿರಿಯ ಕಾರ್ಯಕರ್ತ ಯಶವಂತ್ ಸಿಂಗ್ ಚೌಹಾನ್ ನಿಧನ
Leave a Comment Leave a Comment

Leave a Reply Cancel reply

Your email address will not be published. Required fields are marked *

Stay Connected

FacebookLike
XFollow
InstagramFollow
YoutubeSubscribe
- Advertisement -
Ad imageAd image

Latest News

ರೂಪಾಯಿ ಕುಸಿತ ಮತ್ತು ಹೆಚ್ಚುತ್ತಿರುವ ಕಚ್ಚಾ ತೈಲ ಬೆಲೆಗಳ ಮಧ್ಯೆ ಭಾರತೀಯ ಷೇರು ಮಾರುಕಟ್ಟೆಗಳು ಕೆಂಪು ಬಣ್ಣದಲ್ಲಿ ತೆರೆದಿವೆ
Business
May 23, 2026
ಮಹಾರಾಷ್ಟ್ರದ ಕ್ರಮದ ನಂತರ ವಾಯುಯಾನ ಇಂಧನಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡಲು ಕಾಂಗ್ರೆಸ್ ಆಡಳಿತದ ರಾಜ್ಯಗಳಿಗೆ ಕೇಂದ್ರ ಒತ್ತಾಯಿಸಿದೆ
National
May 23, 2026
ಆರ್ಥಿಕವಾಗಿ ಮುಂದುವರಿದ ಒಬಿಸಿ ಕುಟುಂಬಗಳಿಗೆ ಮೀಸಲಾತಿ ಸೌಲಭ್ಯ ಮುಂದುವರಿಕೆ ಬಗ್ಗೆ ಸುಪ್ರೀಂ ಕೋರ್ಟ್ ಪ್ರಶ್ನೆ
National
May 23, 2026
ಲಕ್ನೋ ಸೂಪರ್ ಜೈಂಟ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಐಪಿಎಲ್ 2026ರ ಸ್ಪರ್ಧೆಗೆ ಸಿದ್ಧತೆ ನಡೆಸುತ್ತಿವೆ.
Sports
May 23, 2026

//

We are rapidly growing digital news startup that is dedicated to providing reliable, unbiased, and real-time news to our audience.

We are rapidly growing digital news startup that is dedicated to providing reliable, unbiased, and real-time news to our audience.

Sign Up for Our Newsletter

Sign Up for Our Newsletter

Subscribe to our newsletter to get our newest articles instantly!

Follow US

Follow US

© 2025 cliQ India. All Rights Reserved.

CliQ INDIA Kannada
  • English – अंग्रेज़ी
  • Hindi – हिंदी
  • Punjabi – ਪੰਜਾਬੀ
  • Marathi – मराठी
  • German – Deutsch
  • Gujarati – ગુજરાતી
  • Urdu – اردو
  • Telugu – తెలుగు
  • Bengali – বাংলা
  • Kannada – ಕನ್ನಡ
  • Odia – ଓଡିଆ
  • Assamese – অসমীয়া
  • Nepali – नेपाली
  • Spanish – Española
  • French – Français
  • Japanese – フランス語
  • Arabic – فرنسي
Welcome Back!

Sign in to your account

Username or Email Address
Password

Lost your password?