ಗುರುಗ್ರಾಮ, 13 ಜನವರಿ(ಹಿ.ಸ):
ಆ್ಯಂಕರ್ :
ಗುರುಗ್ರಾಮದ ಹೋಟೆಲ್ನಲ್ಲಿ ಅನುಮಾನಾಸ್ಪದವಾಗಿ ಕೊಲೆಯಾಗಿದ್ದ ಮಾಜಿ ರೂಪದರ್ಶಿ ದಿವ್ಯಾ ಪಹುಜಾ ಮೃತದೇಹ ಪತ್ತೆಯಾಗಿದೆ. ಹರ್ಯಾಣದ ತೊಹ್ನಾದಲ್ಲಿ ಕಾಲುವೆಯಲ್ಲಿ ಪಹುಜಾ ಮೃತದೇಹ ಪತ್ತೆಯಾಗಿದೆ. ಗುರುಗ್ರಾಮ್ ಪೊಲೀಸರ ಪ್ರಕಾರ, ಪಹುಜಾ ಅವರ ಕುಟುಂಬ ಸದಸ್ಯರು ಆಕೆಯ ದೇಹವನ್ನು ಸಹ ಗುರುತಿಸಿದ್ದಾರೆ. ಗುರುಗ್ರಾಮ ಪೋಲೀಸರ ಆರು ತಂಡಗಳು ಪಹುಜಾಳ ದೇಹವನ್ನು ಹೊರತೆಗೆಯಲು ಕಾರ್ಯಪ್ರವೃತ್ತವಾಗಿದ್ದವು.
ದಿವ್ಯಾಳ ಕೊಲೆಯಾಗಿ 12 ದಿನಗಳ ಬಳಿಕ ಶವ ಪತ್ತೆಯಾಗಿದೆ. ಇಂದು ಬೆಳಗ್ಗೆಯಿಂದ ಪಟಿಯಾಲದ ಎನ್ಡಿಆರ್ಎಫ್ ತಂಡ ಮತ್ತು ಗುರುಗ್ರಾಮದ ಅಪರಾಧ ವಿಭಾಗದ ತಂಡ ಶೋಧ ಕಾರ್ಯಾಚರಣೆ ಆರಂಭಿಸಿತ್ತು.
ಜನವರಿ 2 ರಂದು ಬಸ್ ನಿಲ್ದಾಣದ ಕಾಂಪ್ಲೆಕ್ಸ್ ಬಳಿಯ ಹೋಟೆಲ್ನಲ್ಲಿ ದಿವ್ಯಾಳನ್ನು ಆಕೆಯ ಸ್ನೇಹಿತ ಮತ್ತು ಹೋಟೆಲ್ ಮಾಲೀಕ ಅಭಿಜೀತ್ ಗುಂಡಿಕ್ಕಿ ಹತ್ಯೆ ಮಾಡಿದ್ದರು.
ಹಿಂದೂಸ್ತಾನ್ ಸಮಾಚಾರ್
