ಹೈದರಾಬಾದ್ , 23 ನವೆಂಬರ್ (ಹಿ.ಸ):
ಆ್ಯಂಕರ್ :
ನಟ ನಾಗ ಚೈತನ್ಯ ಅವರಿಗೆ ಇಂದು (ನವೆಂಬರ್ 23) ಜನ್ಮದಿನದ ಸಂಭ್ರಮ. ಅವರಿಗೆ ಎಲ್ಲರೂ ಶುಭಾಶಯ ಕೋರುತ್ತಿದ್ದಾರೆ. ನಾಗ ಚೈತನ್ಯ ಅವರ ಹೊಸ ಸಿನಿಮಾ ಘೋಷಣೆ ಆಗಬಹುದು ಎಂದು ನಿರೀಕ್ಷಿಸಲಾಗುತ್ತಿದೆ. ಈಗಾಗಲೇ ಅನೌನ್ಸ್ ಆಗಿರುವ ಚಿತ್ರಗಳಿಂದ ಪೋಸ್ಟರ್ ಅಥವಾ ಟೀಸರ್ ರಿಲೀಸ್ ಆಗೋ ಸಾಧ್ಯತೆ ಇದೆ. ನಾಗ ಚೈತನ್ಯ ಕಳೆದ 14 ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರ ಆಸ್ತಿ ಬಗ್ಗೆ ಇಲ್ಲಿದೆ ವಿವರ.
ನಾಗ ಚೈತನ್ಯ ಅವರು ‘ಜೋಶ್’ ಸಿನಿಮಾದಲ್ಲಿ ಮೊದಲು ನಟಿಸಿದರು. ಈ ಸಿನಿಮಾ 2009ರಲ್ಲಿ ರಿಲೀಸ್ ಆಯಿತು. ಇದಾದ ಬಳಿಕ ರಿಲೀಸ್ ಆದ ‘ಯೇ ಮಾಯ ಚೇಸಾವೆ’ (2010) ರಿಲೀಸ್ ಆಗಿ ಸೂಪರ್ ಹಿಟ್ ಆಯಿತು. ಈ ಸಿನಿಮಾದಲ್ಲಿ ನಾಗ ಚೈತನ್ಯ ಹಾಗೂ ಸಮಂತಾ ಒಟ್ಟಾಗಿ ನಟಿಸಿದ್ದರು. ಗೌತಮ್ ಮೆನನ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಆ ಬಳಿಕ ನಾಗ ಚೈತನ್ಯ ಅದೃಷ್ಟ ಬದಲಾಯಿತು. ಅಕ್ಕಿನೇನಿ ನಾಗಾರ್ಜುನ ಮಗ ಎನ್ನುವ ಕಾರಣಕ್ಕೆ ಅವರಿಗೆ ಸುಲಭದಲ್ಲಿ ಚಿತ್ರರಂಗಕ್ಕೆ ಎಂಟ್ರಿ ಸಿಕ್ಕಿತು ಎಂಬುದು ಅನೇಕರ ಆರೋಪ. ಆದರೆ, ನಟನೆ ಮೂಲಕ ಅವರು ತಮ್ಮನ್ನು ತಾವು ಸಾಬೀತು ಮಾಡಿಕೊಂಡಿದ್ದಾರೆ.
ನಾಗ ಚೈತನ್ಯ ಅವರ ಒಟ್ಟೂ ಆಸ್ತಿ 173 ಕೋಟಿ ರೂಪಾಯಿ ಎನ್ನಲಾಗಿದೆ. ಅವರು ಪ್ರತಿ ಸಿನಿಮಾಗೆ 10ರಿಂದ 12 ಕೋಟಿ ರೂಪಾಯಿ ಪಡೆಯುತ್ತಾರೆ. ನಾಗ ಚೈತನ್ಯ ಅವರು ಪ್ರತಿ ತಿಂಗಳು 2 ಕೋಟಿ ರೂಪಾಯಿ ಗಳಿಸುತ್ತಿದ್ದಾರೆ. ಹಲವು ಬ್ರ್ಯಾಂಡ್ಗಳಿಗೆ ಅವರು ಪ್ರಚಾರ ರಾಯಭಾರಿ ಆಗಿದ್ದಾರೆ. ಇದಕ್ಕೆ 1.5 ಕೋಟಿ ರೂಪಾಯಿ ಪಡೆಯುತ್ತಾರೆ. ನಾಗ ಚೈತನ್ಯ ಅವರು ಫಿಲ್ಮ್ಫೇರ್ ಅವಾರ್ಡ್ಸ್, ನಂದಿ ಅವಾರ್ಡ್ಸ್ ಹಾಗೂ ಸೈಮಾ ಅವಾರ್ಡ್ಸ್ ಪಡೆದಿದ್ದಾರೆ. ಅವರು ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾ ಮೂಲಕ ಬಾಲಿವುಡ್ ಮಂದಿಗೂ ಹೆಚ್ಚು ಪರಿಚಿತರಾದರು. ಈ ವರ್ಷ ರಿಲೀಸ್ ಆದ ಅವರ ನಟನೆಯ ‘ಕಸ್ಟಡಿ’ ಸಿನಿಮಾ ಸೋತಿದೆ.
ನಾಗ ಚೈತನ್ಯ ಅವರು ಜನಿಸಿದ್ದು 1986ರ, ನವೆಂಬರ್ 23ರಂದು. ಅಕ್ಕಿನೇನಿ ನಾಗಾರ್ಜುನ ಹಾಗೂ ಲಕ್ಷ್ಮೀ ದಗ್ಗುಬಾಟಿ ಮಗನಾಗಿ ಅವರು ಜನಿಸಿದರು. ನಾಗ ಚೈತನ್ಯ ಜನಿಸಿದ ಬಳಿಕ ನಾಗಾರ್ಜುನ ಹಾಗೂ ಲಕ್ಷ್ಮೀ ಬೇರೆ ಆದರು. ಅವರ ಮಲ ಸಹೋದರ ಅಖಿಲ್ ಅಕ್ಕಿನೇನಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ನಾಗ ಚೈತನ್ಯ ಅವರು ಬೆಳೆದಿದ್ದು ಚೆನ್ನೈನಲ್ಲಿ. ಶಿಕ್ಷಣವನ್ನೂ ಅವರು ಅಲ್ಲಿಯೇ ಪಡೆದರು.
ಡಿವೋರ್ಸ್ ವಿಚಾರ
ನಾಗ ಚೈತನ್ಯ ಹಾಗೂ ಸಮಂತಾ ‘ಯೇ ಮಾಯ ಚೇಸಾವೆ’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದರು. ಈ ಚಿತ್ರ 2010ರಲ್ಲಿ ರಿಲೀಸ್ ಆಯಿತು. ಈ ವೇಳೆ ಇವರಿಗೆ ಫ್ರೆಂಡ್ಶಿಪ್ ಆಯಿತು. ಆ ಗೆಳೆತನ ಪ್ರೀತಿಯಾಗಿ ಬದಲಾಯಿತು. ಹಲವು ವರ್ಷಗಳ ಕಾಲ ಇವರು ಡೇಟ್ ಮಾಡಿದರು. 2021ರಲ್ಲಿ ನಾಗ ಚೈತನ್ಯ ಹಾಗೂ ಸಮಂತಾ ಬೇರೆ ಆಗುವ ನಿರ್ಧಾರಕ್ಕೆ ಬಂದರು. ಇದು ಅನೇಕರಿಗೆ ಶಾಕ್ ತಂದಿತ್ತು.
ಹಿಂದೂಸ್ತಾನ್ ಸಮಾಚಾರ್
