
ಕೋಲಾರ, ೧೦ ನವೆಂಬರ್ (ಹಿ.ಸ) :
ಆ್ಯಂಕರ್ : ಕೋಲಾರ ಜಿಲ್ಲಾ ಸೈಬರ್ ಅಪರಾಧ ಮತ್ತು ಮಾಧಕ ವಸ್ತುಗಳ ನಿಯಂತ್ರಣ ಪೊಲೀಸರು ಖಚಿತ ಮಾಹಿತಿಯ ಮೇರೆಗೆ ಕೋಲಾರ ತಾಲ್ಲೂಕು ಶೆಟ್ಟಿಕುಂಟೆ ಗ್ರಾಮದ ಹೊರವಲಯದ ವಿಜಯ್ ಕುಮಾರ್ ಎಂಬುವರ ಜಮೀನಿನ ಫಾಂ ಹೌಸ್ನ ಮೇಲೆ ದಾಳಿ ಮಾಡಿ ಜೂಜಾಟದಲ್ಲಿ ನಿರತರಾಗಿದ್ದ ೧೭ ಮಂದಿಯನ್ನು ಬಂಧಿಸಿ ೨೩ ಲಕ್ಷ ರೂ ನಗದು, ಮೊಬೈಲ್ ಹಾಗೂ ಐಷರಾಮಿ ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ.
ಕೋಲಾರ ತಾಲ್ಲೂಕು ಶೆಟ್ಟಿಕುಂಟೆ ಹೊರವಲಯದಲ್ಲಿ ವಿಜಯಕುಮಾರ್ ಎಂಬುವರಿಗೆ ಸೇರಿದ ಫಾರಂ ಹೌಸ್ನಲ್ಲಿ ಜಿಲ್ಲೆಯ ಹೊರಗಿನವರು ಜೂಜಾಟದಲ್ಲಿ ನಿರತರಾಗಿದ್ದಾಗ ದಾಳಿ ಮಾಡಿ ಬಂಧಿಸಲಾಗಿದೆ. ಬಂಧಿತರನ್ನು ಫೀಟರ್, ಎಸ್ ರಾಜು , ರವೀಂದ್ರನಾಥ್, ಖಲೀಂ ಉಲ್ಲಾ, ಎಂ ವಿಜಯ್ ಗೌಡ, ಆರ್ ರಮೇಶ್, ಮಂಜುನಾಥ್, ಮಂಜುನಾಥ್ ವಿಜಯ್ ಎಂ ಶಶಿಕುಮಾರ್ ವೈ , ಶಿವಕುಮಾರ್ ಬಿ, ಮಹೇಶ್ ಎಸ್, ಕಿಶೋರ್ ಗೌಡ ಸಿಎ, ವಿ ಅಶ್ವಥ್ ನಾರಾಯಣಪ್ಪ, ಡಿ. ಸುರೇಶ್, ಡಿ ಸುಬ್ಬು, ಸುರೇಶ್ ಕುಮಾರ್.ಎಸ್, ದೋಸಪಾಟಿ ಅಶೋಕ್ ಕುಮಾರ್ ಎಂದು ಗುರ್ತಿಸಲಾಗಿದೆ.
ಜೂಜುಕೋರರನ್ನು ವಶಕ್ಕೆ ಪಡೆದುಕೊಂಡು ಜೂಜಾಟಕ್ಕೆ ಪಣವಾಗಿಟ್ಟಿದ್ದ ಸುಮಾರು ೨೦,೫೮,೯೩೦/- ೧-ರೂ ನಗದು, ಮತ್ತು ಆರೋಪಿಗಳ ವಶದಲ್ಲಿದ್ದ ೨೩ ಮೊಬೈಲ್ ಗಳು ಹಾಗೂ ೧೧ ಐಶಾರಾಮಿ ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಸಿಇಎನ್ ಪೊಲೀಸ್ ಠಾಣೆಯ ಪಿಐ ಎಸ್.ಆರ್ ಜಗದೀಶ್ ರವರ ಮುಂದಾಳತ್ವದಲ್ಲಿ ಸಿಬ್ಬಂದಿಯವರಾದ ಹಮೀದ್ ಆನಂದ್ ಕುಮಾರ್, ಅರುಣ್ ಕುಮಾರ್, ಅಂಬರೀಷ, ಸತೀಶ್, ಕೃಷ್ಣಮೂರ್ತಿ, ನಪೀಜ್, ಸಂತೋಷ್ ಎಂ, ಪ್ರಸನ್ನ ಕುಮಾರ್ ಶ್ರೀಎಸ್, ವಿನಯ್ ರವರುಗಳು ಮೇಲ್ಕಂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಸಿಬ್ಬಂದಿಯನ್ನು ಎಸ್.ಪಿ. ನಾರಾಯಣರವರು ಶ್ಲಾಘಿಸಿದ್ದಾರೆ.
ಚಿತ್ರ ; ಕೋಲಾರ ತಾಲ್ಲೂಕಿನ ಶೆಟ್ಟಿಹಳ್ಳಿ ಬಳಿ ಜೂಜಾಟದಲ್ಲಿ ನಿರತರಾಗಿದ್ದ ಆಪಾದಿತರು.
