ಬೆಂಗಳೂರು,
ಆ್ಯಂಕರ್:ಲೋಕಸಭೆ ಚುನಾವಣೆ ಕಾದಾಟ ಈಗಷ್ಟೆ ರಂಗೇರುತ್ತಿದೆ.. ರಾಜ್ಯದ ಮೊದಲ ಹಂತದಲ್ಲಿ ನಾಮಪತ್ರ ಸಲ್ಲಿಕೆಗಳ ಭರಾಟೆ ಶುರುವಾಗ್ತಿದೆ.. ಈ ವೇಳೆ ಘಟಾನುಘಟಿ ನಾಯಕರುಗಳ ಮೂಲಕ ರೋಡ್ ಶೋ, ಸಭೆ-ಸಮಾರಂಭ ನಡೆಸಿ, ಅವರಿಂದ್ಲೇ ನಾಮಪತ್ರ ಸಲ್ಲಿಸುವ ಯೋಜನೆಗಳು ಸಿದ್ದಗೊಂಡಿವೆ.. ಬೆಂಗಳೂರು ಗ್ರಾಮಾಂತರದಲ್ಲಿ ಇವತ್ತೇ ಚುನಾವಣಾ ಕಾವು ಬಿಸಿಲಿಗೆ ಸೆಡ್ಡು ಹೊಡೆಯಲಿದೆ..
ಕರ್ನಾಟಕದ ರಣಕಾಳಗ ಇಂದಿನಿಂದ ಚಾಲನೆ ಸಿಗ್ತಿದೆ.. ಮತಯುದ್ಧದ ಪ್ರಕ್ರಿಯೆ ಅಧಿಕೃತವಾಗಿ ಆರಂಭವಾಗ್ತಿದೆ.. ರಾಜ್ಯದಲ್ಲಿ ಎರಡು ಮತ್ತು ಮೂರನೇ ಹಂತದಲ್ಲಿ ಮತದಾನ ನಡೆಯುತ್ತಿದ್ದು, 2ನೇ ಹಂತದ ಚುನಾವಣಾ ಪ್ರಕ್ರಿಯೆಗೆ ಇವತ್ತು ಅಧಿಸೂಚನೆ ಪ್ರಕಟವಾಗಲಿದೆ.. ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಇಂದಿನಿಂದಲೇ ನಾಮಪತ್ರ ಸಲ್ಲಿಕೆ ಭರಾಟೆ ಆರಂಭವಾಗಲಿದೆ.
ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಇಂದಿನಿಂದ ನಾಮಪತ್ರ ಸಲ್ಲಿಕೆ ಶುರುವಾಗ್ತಿದ್ದು ಏಪ್ರಿಲ್ 4ರ ವರೆಗೂ ನಾಮಪತ್ರ ಸಲ್ಲಿಸಬಹುದಾಗಿದೆ.. ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ ಮೂರು ಗಂಟೆವರೆಗೆ ನಾಮಪತ್ರ ಸಲ್ಲಿಸಬಹುದಾಗಿದೆ.. ಸಾಮಾನ್ಯ ವರ್ಗದ ಅಭ್ಯರ್ಥಿಗಳು 25,000 ರೂ. ಠೇವಣಿ ಇಡಬೇಕಾಗಿದ್ದು, ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ 12,500 ರೂ. ಠೇವಣಿ ನಿಗದಿ ಆಗಿದೆ.. ಏಪ್ರಿಲ್ 6ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಏಪ್ರಿಲ್ 8 ನಾಮಪತ್ರ ವಾಪಸ್ ತೆಗೆದುಕೊಳ್ಳಲು ಕೊನೆಯ ದಿನವಾಗಿದೆ.. ಏಪ್ರಿಲ್ 26ರಂದು ಮತದಾನ ನಡೆಯಲಿದ್ದು, ಜೂನ್ 4ರಂದು ಫಲಿತಾಂಶ ಪ್ರಕಟವಾಗಲಿದೆ.ಒಟ್ಟಾರೆ, ಎರಡು ಕುಟುಂಬಗಳ ನಡುವಿನ ಮತ ಕದನಕ್ಕೆ ರಾಜ್ಯ ರಾಜಕೀಯ ಮತ್ತೊಮ್ಮೆ ಎದುರು ನೋಡ್ತಿದೆ.. ಬೆಂಗಳೂರು ಗ್ರಾಮಾಂತರದಲ್ಲಿ ಈ ಬಾರಿ ಮತದಾರ ಯಾರಿಗೆ ಮಣೆ ಹಾಕ್ತಾನೆ ಅನ್ನೋದು ಕಾದು ನೋಡಬೇಕಿದೆ
