
ಸಿಂಧನೂರು, 7 ಡಿಸೆಂಬರ್(ಹಿ.ಸ):
ಆ್ಯಂಕರ್ : ಲಾರಿ ಮತ್ತು ಸರಕು ಸಾಗಣೆಯ ಟಾಟಾ ಏಸ್ ನಡುವೆ ನಡೆದ ಭೀಕರ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಸಿಂಧನೂರಿನ ಪಗಡದಿನ್ನಿ ಕ್ಯಾಂಪ್ ಬಳಿ ಗುರುವಾರ ನಡೆದಿದೆ.
ಮೃತರನ್ನು ಸಿಂಧನೂರಿನ ಸಾಯಿ ಸಂಗಮ ಸಪ್ಲುಯರ್ಸ್ನ ಕಾರ್ಮಿಕ ಇಸ್ಮಾಯಿಲ್ ರಷೀದ್ (25), ರವಿ ರಾಜಪ್ಪ (20), ರಮೇಶ ನಿಂಗಪ್ಪ ಕಣೇಕಲ್ಲೂರು (28), ಅಂಬರೀಶ್ ಸೂಗಪ್ಪ ಕಣೇಕಲ್ಲೂರು (28) ಎಂದು ಪೊಲೀಸರು ತಿಳಿಸಿದ್ದಾರೆ.
ಐವರು ಟಾಟಾ ಏಸ್ನಲ್ಲಿ ಮುದ್ದಾಪುರಕ್ಕೆ ತೆರಳುತ್ತಿದ್ದಾಗ ಎದುರಿನಿಂದ ಬಂದ ಲಾರಿ ಡಿಕ್ಕಿ ಹೊಡೆದ ಕಾರಣ ಟಾಟಾ ಏಸ್ನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸಮೀರ್ ಮನೋಜ್ ಬಲಗಾಲಿಗೆ ಗಂಭೀರ ಗಾಯಗಳಾಗಿದ್ದು ಆತನ್ನು ರಾಯಚೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಿಂಧನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಡೆದಿದೆ.
