ನವದೆಹಲಿ, 4 ಮಾರ್ಚ್ :
ಆ್ಯಂಕರ್:ರಾಜ್ಯ ಜಾರಿ ನಿರ್ದೇಶನಾಲಯದ ಮುಖ್ಯಸ್ಥರು ಹಾಗೂ ಕೇಂದ್ರೀಯ ಜಿ ಎಸ್ ಟಿಯ ಮುಖ್ಯಸ್ಥರ ರಾಷ್ಟ್ರೀಯ ಸಮ್ಮೇಳನ ಇಂದು ನಡೆಯಲಿದ್ದು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಉದ್ಘಾಟಿಸಲಿದ್ದಾರೆ. ಕಂದಾಯ ಇಲಾಖೆ ಒಂದು ದಿನದ ರಾಷ್ಟ್ರೀಯ ಸಮ್ಮೇಳನವನ್ನು ಇಂದು ದೆಹಲಿಯಲ್ಲಿ ಆಯೋಜಿಸಿದೆ. ಜಿಎಸ್ ಟಿ ವಂಚನೆ, ನಕಲಿ ರಸೀದಿ ಮತ್ತಿತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಕುರಿತು ಸಭೆಯಲ್ಲಿ ಮಹತ್ವದ ಚರ್ಚೆ ನಡೆಯಲಿದೆ. ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಳ್ಳುವ ಕುರಿತಂತೆಯೂ ಚರ್ಚಿಸಲಾಗುತ್ತಿದೆ. ಜಿ ಎಸ್ ಟಿ ಆಡಳಿತವನ್ನು ಬಲಪಡಿಸಲು ಸಾಮೂಹಿಕ ಪ್ರಯತ್ನ ಮತ್ತು ಪರಸ್ಪರ ಕಲಿಕೆಗೆ ಒತ್ತು ನೀಡಲಾಗುತ್ತಿದೆ.
