ಚೆನ್ನೈ, 4 ಮಾರ್ಚ್ :
ಆ್ಯಂಕರ್:ದಳಪತಿ ವಿಜಯ್ ಹೆಸರು ಕೇಳಿದರೆ ಸಾಕು ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಾರೆ. ಅಷ್ಟರಮಟ್ಟಿಗೆ ಅಭಿಮಾನಿಗಳು ಹೊಂದಿರುವ ಈ ನಟ ಸಿನಿಮಾ ಕ್ಷೇತ್ರಕ್ಕೆ ಬಾಯ್ ಹೇಳಿ ರಾಜಕೀಯಕ್ಕೆ ಹಾಯ್ ಹೇಳಲು ಮುಂದಾಗಿರುವ ವಿಚಾರ ಗೊತ್ತೇ ಇದೆ. ಅದಕ್ಕೆಂದೇ ತಮಿಳುನಾಡು ವೆಟ್ರಿ ಕಳಗಂ ಎಂಬ ಪಕ್ಷವನ್ನು ಘೋಷಣೆ ಮಾಡಿದ್ದಾರೆ. ಆದರೀಗ ಈ ಪಕ್ಷದ ಮೂಲಕ ಜನಸೇವೆ ಮಾಡಲು ಮತ್ತು ತನ್ನ ಪಕ್ಷಕ್ಕೆ ಅತಿ ಹೆಚ್ಚು ಸೀಟ್ ಕಬಳಿಸಲು ವಿಜಯ್ ಯೋಜನೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ.
ವಿಜಯ್ ಮೊಬೈಲ್ ಅಪ್ಲಿಕೇಷನ್ ಬಿಡಲು ಯೋಚಿಸಿದ್ದಾರಂತೆ. ಅದರಲ್ಲಿ 2 ಕೋಟಿ ಸದಸ್ಯರನ್ನು ಸೇರಿಸುವ ಗುರಿಯನ್ನು ಹೊಂದಿದ್ದಾರಂತೆ. ಅದಕ್ಕೆಂದೆ ಹೊಸ ಅರ್ಜಿ ಪರಿಚಯಿಸಿ ಸದಸ್ಯತ್ವ ನೋಂದಣಿ ಮಾಡುವ ಪ್ಲಾನ್ ಹಾಕಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ವಿಜಯ್ ಪಕ್ಷ ಬುಧವಾರ ಅಥವಾ ಗುರುವಾರದಂದು ಹೊಸ ಆ್ಯಪ್ ಬಿಡುಗಡೆ ಮಾಡಲಿದ್ದು, ಆ್ಯಪ್ ಪಾಸ್ವರ್ಡ್ ಅನ್ನು ಜಿಲ್ಲಾ ಉಸ್ತುವಾರಿಗೆ ಮತ್ತು ಸಂಯೋಜಕರಿಗೆ ನೀಡಲು ಚಿಂತಿಸಿದೆ ಎಂದು ಹೇಳಲಾಗುತ್ತಿದೆ.
ಮೇ ತಿಂಗಳೊಳಗೆ ಹೆಚ್ಚಿನ ಸದಸ್ಯರನ್ನು ಸೇರಿಸುವ ಗುರಿಯನ್ನ ದಳಪತಿ ಹೊಂದಿದ್ದು, 234 ಕ್ಷೇತ್ರಗಳ ಮೇಲೆ ವಿಜಯ್ ಗುರಿ ಹಾಕಿಕೊಂಡಿದ್ದಾರಂತೆ. ಮತ್ತೊಂದು ಹರಿದಾಡುತ್ತಿರುವ ಮಾಹಿತಿ ಎಮದರೆ 234 ಕ್ಷೇತ್ರಗಳನ್ನು 100 ಜಿಲ್ಲೆಗಳಾಗಿ ವಿಂಗಡಿಸಿ ಜವಾಬ್ದಾರಿ ನೀಡಲು ನಿರ್ಧಿರಿಸಿದೆ ಎಂಬ ಸುದ್ದಿಯೂ ಕೇಳಿಬರುತ್ತಿದೆ.
