ಮುಂಬೈ ,:
ಆ್ಯಂಕರ್ : ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿ ಐ) ಇಂದು ಮಹತ್ವದ ಮಾರ್ಗಸೂಚಿಯೊಂದನ್ನು ಹೊರಡಿಸಿದೆ.
ಕ್ರೆಡಿಟ್ ಕಾರ್ಡ್ ವಿತರಕರು ಇತರ ಕಾರ್ಡ್ ನೆಟ್ ವರ್ಕ್ ಗಳೊಂದಿಗೆ ಯಾವುದೇ ಒಪ್ಪಂದವನ್ನು ಮಾಡಿಕೊಳ್ಳಬಾರದು ಎಂದು ಹೇಳಿದೆ. ಹಾಗೂ ಇತರ ಕ್ರೆಡಿಟ್ ಕಾರ್ಡ್ ನೆಟ್ ವರ್ಕ್ ಸೇವೆಗಳನ್ನು ಪಡೆಯುವುದನ್ನು ತಡೆಯಬಹುದು ಎಂದು ಹೇಳಿದೆ.
ಕಾರ್ಡ್ ವಿತರಕರು ತಮ್ಮ ಅರ್ಹ ಗ್ರಾಹಕರಿಗೆ ಕಾರ್ಡ್ ವಿತರಿಸುವಾಗ ಅವರಿಗೆ ಬಹು ಆಯ್ಕೆಯ ವ್ಯವಸ್ಥೆಯನ್ನು ನೀಡಬೇಕು ಎಂದು ಹೇಳಿದೆ.
ಕ್ರೆಡಿಟ್ ಕಾರ್ಡ್ ನೀಡುವಾಗ ಗ್ರಾಹಕರಿಗೆ ಬಹು ಆಯ್ಕೆಯನ್ನು ಕ್ರೆಡಿಟ್ ಕಾರ್ಡ್ ವಿತರಕರು ಅಗತ್ಯವಾಗಿ ನೀಡಬೇಕು ಹಾಗೂ ಈಗಾಗಲೇ ಕ್ರೆಡಿಟ್ ಕಾರ್ಡ್ ಹೊಂದಿರುವವರಿಗೆ ಮುಂದಿನ ನವೀಕರಣದ ಅಥವಾ ಆಧುನೀಕರಿಸುವ ಸಮಯದಲ್ಲಿ ಈ ಬಹು ಆಯ್ಕೆಗಳನ್ನು ನೀಡಬಹುದು ಎಂದು ಆರ್ ಬಿ ಐ ಹೇಳಿದೆ. ಆರ್ ಬಿ ಐ ಕ್ರೆಡಿಟ್ ಕಾರ್ಡ್ ವಿತರಕರು ತಮ್ಮ ಗ್ರಾಹಕರಿಗೆ ಕೆಲವೊಂದು ಇಂತಹ ವ್ಯವಸ್ಥೆಗಳನ್ನು ನೀಡಿಲ್ಲ ಎಂದು ಗಮನಿಸಿದ ಕಾರಣ ಈ ಕ್ರಮವನ್ನು ತಂದಿದೆ.
