ಮಂಗಳೂರು,13ನವೆಂಬರ್ (ಹಿ.ಸ):
ಆ್ಯಂಕರ್ :ಹಂದಿ ಸಾಕಾಣಿಕೆದಾರರು ಮತ್ತು ಹಂದಿ ಮಾಂಸ ಪೂರೈಕೆದಾರರು ಮಾಂಸದ ಬೆಲೆಯನ್ನು 16.6% ರಷ್ಟು ಏರಿಕೆ ಮಾಡುವ ಬಗ್ಗೆ ನಿರ್ಧಾರ ಕೈಗೊಂಡ ನಂತರ ಕರಾವಳಿ ಕರ್ನಾಟಕದಲ್ಲಿ ಹಂದಿಮಾಂಸ ಸೇವಿಸುವವರ ಮೇಲೆ ಭಾರೀ ಪರಿಣಾಮ ಬೀರಿದೆ.
ಕೆಜಿಗೆ 240 ರೂಪಾಯಿ ಇದ್ದ ಹಂದಿ ಮಾಂಸ ಬೆಲೆಯು 280 ರೂ.ಗೆ ಏರಿಕೆಯಾಗಲಿದೆ. ಇದು ಇತ್ತೀಚಿನ ವರ್ಷಗಳಲ್ಲಿ ಗರಿಷ್ಠ ಏರಿಕೆಯಾಗಿದ್ದು, ಇಂದಿನಿಂದ (ನವೆಂಬರ್ 13) ಜಾರಿಗೆ ಬರಲಿದೆ. ಹಂದಿಮಾಂಸ ಮಾರಾಟಗಾರರ ಪ್ರಕಾರ ಪೂರೈಕೆ ಪ್ರಮಾಣದ್ಲಿ ಭಾರೀ ವ್ಯತ್ಯಯ ಕಂಡುಬಂದಿರುವುದೆ ಬೆಲೆ ಏರಿಕೆಗೆ ಕಾರಣವಾಗಿದೆ.
ವ್ಯಾಪಕವಾಗಿ ಸೇವಿಸುವ ಡ್ಯುರೋಕ್ ಎಂಬ ಹಂದಿ ತಳಿ ಕಳೆದ ಕೆಲವು ತಿಂಗಳುಗಳಿಂದ ಬಹಳ ಸೀಮಿತ ಪ್ರಮಾಣದಲ್ಲಿ ಪೂರೈಕೆಯಾಗುತ್ತಿದೆ. ಅಲ್ಲದೆ, ಹೆಚ್ಚಿದ ಇಂಧನ, ಫೀಡ್ ಆಹಾರ ಮತ್ತು ಹಂದಿ ಸಾಕಣೆಯ ಇತರ ಅವಶ್ಯಕತೆಗಳು ಹೆಚ್ಚಳಕ್ಕೆ ಅಂಶಗಳಾಗಿವೆ.
ಹಿಂದೂಸ್ತಾನ್ ಸಮಾಚಾರ್
