ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಬೆಳಗ್ಗೆ ೧೧ ಗಂಟೆಗೆ ಆಕಾಶವಾಣಿಯ ’ಮನ್ ಕಿ ಬಾತ್’ ಕಾರ್ಯಕ್ರಮದ ಮೂಲಕ, ತಮ್ಮ ವಿಚಾರಗಳನ್ನು ದೇಶದ ಜನತೆಯೊಂದಿಗೆ ಹಂಚಿಕೊಳ್ಳಲಿದ್ದಾರೆ. ಇದು ಮನದ ಮಾತು ಸರಣಿಯ ೧೧೦ನೇ ಆವೃತ್ತಿಯಾಗಿದೆ. ಪ್ರಧಾನಿ ಅವರು, ತಮ್ಮ ಚಿಂತನೆಗಳೊಂದಿಗೆ ಸಾರ್ವಜನಿಕರ ಅನಿಸಿಕೆ, ಅಭಿಪ್ರಾಯಗಳನ್ನು ಸಹ ಈ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಲಿದ್ದಾರೆ. ಆಕಾಶವಾಣಿ ಮತ್ತು ದೂರದರ್ಶನದ ಎಲ್ಲಾ ವಾಹಿನಿಗಳು, ನ್ಯೂಸ್ ಆನ್ ಎ.ಐ.ಆರ್, ಯೂಟ್ಯೂಬ್ ಚಾನೆಲ್ ಮೈ ಗೌ.ಡಾಟ್ ಇನ್, ಮೂಲಕ ಈ ಕಾರ್ಯಕ್ರಮ ಏಕಕಾಲಕ್ಕೆ ಪ್ರಸಾರವಾಗಲಿದೆ. ಪ್ರಧಾನಮಂತ್ರಿ ಅವರ ಹಿಂದಿ ಭಾಷಣದ ನಂತರ ’ಮನ್ ಕಿ ಬಾತ್’ನ ಕನ್ನಡ ಅನುವಾದ ಬಿತ್ತರವಾಗಲಿದೆ. ಅಂದು ರಾತ್ರಿ ೮ ಗಂಟೆಗೆ ಕನ್ನಡ ಅವತರಣಿಕೆ ಮರುಪ್ರಸಾರವಾಗಲಿದೆ.
