ದೆಹಲಿ, 26 ಡಿಸೆಂಬರ್(ಹಿ.ಸ):
ಆ್ಯಂಕರ್ :
ಗ್ರಾಹಕರಿಂದ ಠೇವಣಿಗಳನ್ನು ಆಕರ್ಷಿಸಲು ಪೈಪೋಟಿಗೆ ಬಿದ್ದಂತಿರುವ ಬ್ಯಾಂಕುಗಳು ತಮ್ಮಲ್ಲಿನ ಠೇವಣಿ ದರಗಳನ್ನು ಪರಿಷ್ಕರಿಸುತ್ತಲೇ ಇವೆ. ಆರ್ಬಿಐ ಸತತ ಐದು ಬಾರಿ ರೆಪೋ ದರವನ್ನು ಶೇ. 6.5ರಲ್ಲೇ ಉಳಿಸಿಕೊಂಡು ಬರುತ್ತಿದ್ದರೂ ಬ್ಯಾಂಕುಗಳು ಠೇವಣಿ ದರ ಹೆಚ್ಚಿಸುವುದು ನಿಂತಿಲ್ಲ. ಇದೀಗ ನಾಲ್ಕು ಬ್ಯಾಂಕುಗಳು ಎಫ್ಡಿ ದರಗಳನ್ನು ಹೆಚ್ಚಿಸಿವೆ. ಬ್ಯಾಂಕ್ ಆಫ್ ಇಂಡಿಯಾ, ಡಿಸಿಬಿ ಬ್ಯಾಂಕ್, ಕೋಟಕ್ ಮಹೀಂದ್ರ ಬ್ಯಾಂಕ್ ಮತ್ತು ಫೆಡರಲ್ ಬ್ಯಾಂಕುಗಳು ಡೆಪಾಸಿಟ್ ದರಗಳನ್ನು ಹೆಚ್ಚಿಸಿ ಗ್ರಾಹಕರನ್ನು ಸೆಳೆಯುವ ಕೆಲಸ ಮಾಡಿವೆ.
ಡಿಸೆಂಬರ್ನಲ್ಲಿ ಬ್ಯಾಂಕ್ ಆಫ್ ಇಂಡಿಯಾ ಎಫ್ಡಿ ದರಗಳು
ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಫ್ ಇಂಡಿಯಾ ತನ್ನ ಕಿರು ಅವಧಿಯ ಠೇವಣಿ ಪ್ಲಾನ್ಗಳಿಗೆ ದರ ಹೆಚ್ಚಿಸಿದೆ. 46 ದಿನಗಳಿಂದ ಆರಂಭವಾಗಿ ಒಂದು ವರ್ಷದ ಅವಧಿಯ ವಿವಿಧ ಅವಧಿಗೆ ವಿವಿಧ ದರ ಪರಿಷ್ಕರಣೆ ಮಾಡಲಾಗಿದೆ. ಒಂದು ವರ್ಷದ ಠೇವಣಿಗೆ ಬಡ್ಡಿದರವನ್ನು ಶೇ. 7.25ಕ್ಕೆ ಹೆಚ್ಚಿಸಲಾಗಿದೆ. ಆದರೆ, ಇವೆಲ್ಲವೂ ಕೂಡ 2 ಕೋಟಿ ರೂಗಿಂತ ಮೇಲ್ಪಟ್ಟ ಠೇವಣಿಗಳಿಗೆ ಅನ್ವಯ ಆಗುತ್ತದೆ.
ಹಿಂದೂಸ್ತಾನ್ ಸಮಾಚಾರ್
