
ನವದೆಹಲಿ, 27 ನವೆಂಬರ್ (ಹಿ.ಸ):
ಆ್ಯಂಕರ್ :
ಕಳೆದ ವರ್ಷ ಶ್ರೀಹರಿಕೋಟಾದಿಂದ ವಿಕ್ರಮ್-ಎಸ್ ಎಂಬ ರಾಕೆಟ್ ಅನ್ನು ಉಡಾವಣೆ ಮಾಡಲಾಗಿತ್ತು. ಅದು ಭಾರತದ ಮೊದಲ ಖಾಸಗಿ ರಾಕೆಟ್ ಆಗಿತ್ತು. ಭಾರತದ ಮೊದಲ ಖಾಸಗಿ ಬಾಹ್ಯಾಕಾಶ ಕಂಪನಿ ಸ್ಕೈರೂಟ್ ಏರೋಸ್ಪೇಸ್ ತಯಾರಿಸಿದ ರಾಕೆಟ್ ಅದು. ಪವನ್ ಕುಮಾರ್ ಚಂದನ ಮತ್ತು ನಾಗ ಭರತ್ ಡಾಕಾ ಎಂಬಿಬ್ಬರು ಯುವಕರು ಸಂಸ್ಥಾಪಿಸಿದ ಸಂಸ್ಥೆ ಅದು. ಭಾರತದಲ್ಲಿ ಹೊಸ ಇತಿಹಾಸ ಪುಟ ತೆರೆದವರು ಈ ಯುವಕರು. ಇಬ್ಬರೂ ಕೂಡ ಐಐಟಿ ಪದವೀಧರರು ಮತ್ತು ಇಸ್ರೋ ಸಹೋದ್ಯೋಗಿಗಳು. ಇಸ್ರೋ ಕೆಲಸ ಬಿಟ್ಟು ತಮ್ಮದೇ ಬಾಹ್ಯಾಕಾಶ ಕಂಪನಿ ಹುಟ್ಟುಹಾಕಿದವರು. ಇವರ ಆರಂಭಿಕ ಹೆಜ್ಜೆಗಳು ಇಲಾನ್ ಮಸ್ಕ್ ಅವರ ಸ್ಪೇಸ್ ಎಕ್ಸ್ ಹೆಜ್ಜೆಗಳನ್ನು ನೆನಪಿಸುತ್ತವೆ.
ಹಿಂದೂಸ್ತಾನ್ ಸಮಾಚಾರ್
